Advertisement
ಇದು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹಾಗೂ 8 ಜಿಬಿ ರ್ಯಾಮ್‍ನ ಒಂದೇ ಆವೃತ್ತಿ ಹೊಂದಿದೆ. ಇದರ ದರ ಫ್ಲಿಪ್‍ಕಾರ್ಟ್ ನಲ್ಲಿ 20,990 ರೂ.
Related Articles
Advertisement
ಪ್ರೊಸೆಸರ್ : ಇದರಲ್ಲಿ, 2.05 ಗಿಗಾಹಟ್ಜ್, ಎಂಟು ಕೋರ್ ಗಳುಳ್ಳ ಮೀಡಿಯಾಟೆಕ್ ಹೀಲಿಯೋ ಜಿ95 ಪ್ರೊಸೆಸರ್ ಬಳಸಲಾಗಿದೆ. ಇದು ಸ್ನಾಪ್‍ಡ್ರಾಗನ್ 732 ಜಿ ಪ್ರೊಸೆಸರ್ ಗೆ ಸರಿಸಮಾನವಾದ ಪ್ರೊಸೆಸರ್. ಈ ಹೀಲಿಯೋ ಜಿ 95 ಪ್ರೊಸೆಸರ್ ಫೋನಿನ ವೇಗವನ್ನು ತೃಪ್ತಿಕರವಾಗಿ ನಿರ್ವಹಿಸುತ್ತದೆ. ಗೇಮಿಂಗ್ ಕಾರ್ಯಾಚರಣೆ, ಎಸ್‍ಡಿ 732 ಗಿಂತ ವೇಗವಾಗಿದೆ. ಒಟ್ಟಾರೆ ಫೋನಿನಲ್ಲಿ ವೇಗಕ್ಕೇನೂ ತೊಂದರೆಯಿಲ್ಲ. ಬಳಕೆಯಲ್ಲಿ ಅಡಚಣೆ, ತಡೆಯುವಿಕೆ ಉಂಟಾಗಲಿಲ್ಲ.
ಆಂಡ್ರಾಯ್ಡ್ 11 ಆವೃತ್ತಿ ಹೊಂದಿದ್ದು, ಫನ್‍ಟಚ್ ಓಎಸ್ ನ ಹೊಂದಾಣಿಕೆ ಮಾಡಲಾಗಿದೆ. ಫೋನಿನೊಂದಿಗೆ ನಿಮಗೆ ಬೇಕೋ ಬೇಡವೋ ಕೆಲವು ಆಪ್‍ಗಳು ಬಂದಿರುತ್ತವೆ! ಬೇಡವೆನಿಸಿದರೆ, ಅವನ್ನು ನೀವು ಅನ್ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಫನ್ ಟಚ್‍ನ ಕೆಲವು ಆಯ್ಕೆಗಳು ಬಳಕೆದಾರ ಸ್ನೇಹಿಯಾಗಿವೆ.
ಕ್ಯಾಮರಾ : 64 ಮೆ.ಪಿ. 2 ಮೆ.ಪಿ. ಮತ್ತು 2. ಮೆ.ಪಿ.ಯ ಮೂರು ಲೆನ್ಸ್ ಗಳುಳ್ಳ ತ್ರಿವಳಿ ಕ್ಯಾಮರಾವನ್ನು ಹಿಂಬದಿಗೆ ನೀಡಲಾಗಿದೆ. 16 ಮೆ.ಪಿ. ಸೆಲ್ಫೀ ಕ್ಯಾಮರಾ ಇದೆ. ಕ್ಯಾಮರಾಗಳ ಗುಣಮಟ್ಟ ಒಂದು ಮಧ್ಯಮ ದರ್ಜೆಯ ಫೋನಿನಲ್ಲಿರಬೇಕಾದ ಸಾಮರ್ಥ್ಯದಲ್ಲಿದೆ. ಇದರಲ್ಲೊಂದು ಡುಯಲ್ ವ್ಯೂ ವಿಡಿಯೋ ಎಂಬ ಫೀಚರ್ ಇದೆ. ಇದನ್ನು ಆನ್ ಮಾಡಿಕೊಂಡರೆ, ಏಕಕಾಲಕ್ಕೆ ಸೆಲ್ಫಿ ಕ್ಯಾಮರಾ ಹಾಗೂ ಹಿಂಬದಿ ಕ್ಯಾಮರಾ ವಿಡಿಯೋ ಶೂಟ್ ಮಾಡುತ್ತವೆ. ರೆಕಾರ್ಡ್ ಆದ ವಿಡಿಯೋ ಪ್ಲೇ ಮಾಡಿದಾಗ ಪರದೆಯಲ್ಲಿ ಅರ್ಧ ಭಾಗ ಮುಂಬದಿ ಕ್ಯಾಮರಾದ, ಇನ್ನರ್ಧಭಾಗ ಹಿಂಬದಿ ಕ್ಯಾಮರಾ ವಿಡಿಯೋ ನೋಡಬಹುದು. ಆದರೆ ಇದರಿಂದ ಏನುಪಯೋಗ? ಎಂಬುದು ಅರ್ಥವಾಗಲಿಲ್ಲ.
ಬ್ಯಾಟರಿ: 4000 ಎಂಎಎಚ್ ಬ್ಯಾಟರಿ ಹೊಂದಿದೆ. ಇದಕ್ಕೆ 33 ವ್ಯಾಟ್ಸ್ ಚಾರ್ಜರ್ ನೀಡಲಾಗಿದೆ. ಶೇ. 65ರಷ್ಟು ಚಾರ್ಜ್ ಅರ್ಧ ಗಂಟೆಯಲ್ಲಾಗುತ್ತದೆ. ಶೇ. 100ರಷ್ಟು ಚಾರ್ಜ್ ಆಗಲು 1 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತದೆ. ಬ್ಯಾಟರಿ ಒಂದು ದಿನದ ಬಳಕೆಗೆ ಸಾಕಾಗುತ್ತದೆ.
ಎಲ್ಲ ಸರಿ, ಈ ಫೋನಿನಲ್ಲಿ 5ಜಿ ಇದೆಯಾ? 4ಜಿ ಮಾತ್ರನಾ ಹೇಳಲೇ ಇಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡೇ ಮೂಡಿರುತ್ತದೆ. ಈ ಪ್ರಶ್ನೆಗೆ ಉತ್ತರ 5ಜಿ ಸೌಲಭ್ಯ ಇದರಲ್ಲಿಲ್ಲ! ಅದೊಂದು ಕೊರತೆ ಬಿಟ್ಟರೆ, ಸ್ಲಿಮ್ ಆದ, ಹಗುರ, ಹ್ಯಾಂಡಿಯಾದ, ಸುಂದರ ವಿನ್ಯಾಸದ ಮೊಬೈಲ್ ಫೋನ್ ವಿವೋ ವೈ73.
-ಕೆ.ಎಸ್. ಬನಶಂಕರ ಆರಾಧ್ಯ.
ಇದನ್ನೂ ಓದಿ : ಇಂಗಾಲ ಭಾರ ಇಳಿಸಿದ ವರ್ಕ್ ಫ್ರಂ ಹೋಂ!