Advertisement

ಮಾರ್ಚ್ 25ಕ್ಕೆ ವಿವೋ ಎಕ್ಸ್ 60 ಸೀರಿಸ್ ಭಾರತದಲ್ಲಿ ಬಿಡುಗಡೆ

02:49 PM Mar 23, 2021 | Team Udayavani |

ನವ ದೆಹಲಿ : ವಿವೋ ಎಕ್ಸ್ 60 ಸೀರಿಸ್ ಅಧಿಕೃತವಾಗಿ ಮಾರ್ಚ್ 25 ರಂದು ದೇಶದಲ್ಲಿ ಬಿಡುಗಡೆಯಾಗುವುದಕ್ಕೆ ಮುನ್ನ ವಿವೋ ಎಕ್ಸ್ 60, ವಿವೋ ಎಕ್ಸ್ 60 ಪ್ರೊ ಮತ್ತು ವಿವೋ ಎಕ್ಸ್ 60 ಪ್ರೊ + ಇಂಡಿಯಾ ಬೆಲೆಗಳು ಸೋರಿಕೆಯಾಗಿವೆ.

Advertisement

ಮೂರು ಫೋನ್‌ ಗಳನ್ನು ಆರಂಭದಲ್ಲಿ ಚೀನಾದಲ್ಲಿ ವಿವೋ ಎಕ್ಸ್ 50 ಸೀರಿಸ್  ಬಿಡುಗಡೆ ಮಾಡಲಾಯಿತು. ವಿವೊ ಸೋಮವಾರ(ಮಾ.22) ಮಲೇಷ್ಯಾದಲ್ಲಿ ಬಿಡುಗಡೆ ಸಮಾರಂಭವನ್ನು ಆಯೋಜಿಸಿತ್ತು, ಅಲ್ಲಿ ವಿವೋ ಎಕ್ಸ್ 60 ಮತ್ತು ವಿವೋ ಎಕ್ಸ್ 60 ಪ್ರೊ ಜಾಗತಿಕ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ವಿವೋ ಎಕ್ಸ್ 60 ಜಾಗತಿಕ ರೂಪಾಂತರಗಳು ಚೀನೀ ಮಾದರಿಗಳಿಗಿಂತ ವಿಭಿನ್ನವಾಗಿದೆ.

ಓದಿ :  ಆಫ್‌ಲೈನ್‌ ತರಗತಿ ನಿಲ್ಲದು, ನಿಗದಿತ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ: ಅಶ್ವತ್ಥನಾರಾಯಣ

 ವಿವೋ ಎಕ್ಸ್ 60, ವಿವೋ ಎಕ್ಸ್ 60 ಪ್ರೊ, ವಿವೋ ಎಕ್ಸ್ 60 ಪ್ರೊ + ಭಾರತದಲ್ಲಿ ಬೆಲೆ :

ಭಾರತದಲ್ಲಿ ವಿವೋ ಎಕ್ಸ್ 60, 8 ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್ ಮಾಡೆಲ್ ಗೆ 39,990 ರೂ. 8 ಜಿಬಿ ರಾಮ್ + 256 ಜಿಬಿ ಸ್ಟೋರೇಜ್ ಮಾಡೆಲ್ ಗೆ 43,990 ರೂ ಎಂದು ಮುಂಬೈ ಮೂಲದ ರಿಟೆಲರ್ ಮಹೇಶ್ ಟೆಲಿಕಾಂ ತಿಳಿಸಿದೆ. ವಿವೋ ಎಕ್ಸ್ 60 ಪ್ರೊ ಮತ್ತು ವಿವೋ ಎಕ್ಸ್ 60 ಪ್ರೊ + ಗೆ 49,990 ರೂ. 12 ಜಿಬಿ ರ್ಯಾಮ್ + 256 ಜಿಬಿ ಸ್ಟೋರೇಜ್ ಮಾಡೆಲ್ ಗೆ 69,990 ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎಕ್ಸ್ 60 ಸಿರೀಸ್ ನ ಸ್ಮಾರ್ಟ್‌ ಫೋನ್‌ಗಳ ಅಧಿಕೃತ ಬೆಲೆಗಳನ್ನು ವಿವೋ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಮಾರ್ಚ್ 25 ರಂದು ಅನಾವರಣ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಕಂಪನಿ ದೃಢಪಡಿಸಿದೆ.

Advertisement

ಓದಿ :  ಶರದ್ ಪವಾರ್ ಸುಳ್ಳು ಹೇಳುತ್ತಿದ್ದಾರೆ, ದೇಶ್ ಮುಖ್ ಅವರನ್ನು ರಕ್ಷಿಸುತ್ತಿದ್ದಾರೆ :ಫಡ್ನವಿಸ್

ಏತನ್ಮಧ್ಯೆ, ವಿವೋ ಎಕ್ಸ್ 60 ಮತ್ತು ವಿವೋ ಎಕ್ಸ್ 60 ಪ್ರೊ ಜಾಗತಿಕ ಆವೃತ್ತಿಗಳು ಮಲೇಷ್ಯಾದಲ್ಲಿ ಸೋಮವಾರ(ಮಾ.22) ರಂದು ಬಿಡುಗಡೆಗೊಂಡವು. ವಿವೋ ಎಕ್ಸ್ 60 MYR 2,699 (ಸರಿಸುಮಾರು 47,400 ರೂ.) ಬೆಲೆಯನ್ನು ಹೊಂದಿದೆ, ಮತ್ತು ವಿವೋ ಎಕ್ಸ್ 60 ಪ್ರೊ ಬೆಲೆ MYR 3,299 (ಸರಿಸುಮಾರು 58,000 ರೂ.) ಆಗಿದೆ. ಎರಡೂ ಫೋನ್‌ ಗಳು ಪ್ರಮಾಣಿತ 12 ಜಿಬಿ RAM + 256GB ಸ್ಟೋರೇಜ್ ಗಳನ್ನು ಹೊಂದಿದೆ.

ವಿವೋ ಎಕ್ಸ್ 60, ವಿವೋ ಎಕ್ಸ್ 60 ಪ್ರೊ ವಿಶೇಷತೆಗಳು :

ಡ್ಯುಯಲ್ ಸಿಮ್ (ನ್ಯಾನೋ) ವಿವೊ ಎಕ್ಸ್ 60 ಮತ್ತು ವಿವೊ ಎಕ್ಸ್ 60 ಪ್ರೊ ಜಾಗತಿಕ ಮಾಡೆಲ್ ಗಳು ಅನೇಕ ಹೋಲಿಕೆಗಳನ್ನು ಹೊಂದಿವೆ. ಆಂಡ್ರಾಯ್ಡ್ 11 ಆಧಾರಿತ ಫೋನ್‌ ಟಚ್ ಓಎಸ್ 11.1 ನೊಂದಿಗೆ ಫೋನ್‌ಗಳು ಲಭ್ಯವಾಗಲಿವೆ. ಫೋನ್‌ ಗಳು 6.5-ಇಂಚಿನ ಪೂರ್ಣ ಎಚ್‌ ಡಿ + (1,080×2,376 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್ಪ್ಲೇಯನ್ನು 19.8:9 ಆಕಾರ ಅನುಪಾತ ಮತ್ತು 120Hz ರಿಫ್ರೆಶ್ ರೇಟ್ ನ್ನು ಒಳಗೊಂಡಿದೆ. ವಿವೋ ಎಕ್ಸ್ 60 ಮತ್ತು ವಿವೊ ಎಕ್ಸ್ 60 ಪ್ರೊ ಸಹ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 SoC ನಿಂದ ನಿಯಂತ್ರಿಸಲ್ಪಡುತ್ತವೆ. ಇದು ಎಕ್ಸಿನೋಸ್ 1080 SoC ನೊಂದಿಗೆ ಬರುವ ವಿವೊ ಎಕ್ಸ್ 60 ಮತ್ತು ವಿವೊ ಎಕ್ಸ್ 60 ಪ್ರೊ ನ ಚೀನಾ ರೂಪಾಂತರಗಳಿಗಿಂತ ಭಿನ್ನವಾಗಿದೆ. ವಿವೋ ಎಕ್ಸ್ 60 ಪ್ರೊ + ನಲ್ಲಿ ವಿವೋ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ಅನ್ನು ನೀಡಿದ್ದು, ಇದು ಚೀನಾದಲ್ಲಿ ಮಾತ್ರ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಮಾಡೆಲ್ ನಲ್ಲಿ ಈ ಮೇಲಿನ ಎಲ್ಲಾ ವಿಶೇಷತೆಗಳನ್ನು ಒಳಗೊಂಡು ಇನ್ನೂ ಹಲವು ವಿಶೇಷತೆಗಳನ್ನು ನಿರೀಕ್ಷಿಸಲಾಗಿದೆ.

ಓದಿ :  ಕುಲಾಲ ಭವನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ದೇವದಾಸ್‌ ಎಲ್‌. ಕುಲಾಲ್‌

Advertisement

Udayavani is now on Telegram. Click here to join our channel and stay updated with the latest news.

Next