ನವದೆಹಲಿ: ಜಾಗತಿಕ ಪ್ರಿಮೀಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ ಇಂಡಿಯಾ ಮಂಗಳವಾರ ಅತ್ಯಾಧುನಿಕ ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್ ತಂತ್ರಜ್ಞಾನವುಳ್ಳ ವಿವೋ ಎಕ್ಸ್ 21 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.
ಫೋನ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೋ ಇಂಡಿಯಾ ಸಿಇಒ ಕೆಂಟ್ ಚೆಂಗ್, ವಿವೋ ಗ್ರಾಹಕರ ನೋವು, ನಲಿವುಗಳನ್ನು ಪರಿಹರಿಸಲು ನಮ್ಮ ಸಂಸ್ಥೆ ಸತತವಾಗಿ ನಾವಿನ್ಯತೆಯನ್ನು ಅನುಸರಿಸುತ್ತಿದೆ. ಗ್ರಾಹಕರ ಆದ್ಯತೆಗಳಿಗೆ ಅನುಸಾರ ಸ್ಮಾರ್ಟ್‌ಫೋನ್ ಅನ್ನು ವಿಕಾಸಗೊಳಿಸುವುದರೊಂದಿಗೆ ಮಾರುಕಟ್ಟೆಯ ಯಶಸ್ಸಿನಲ್ಲಿ ಭಾಗಿಯಾಗಿದೆ.
ನಾವಿನ್ಯತೆ ಮಿತಿಯನ್ನು ಮೀರಿ ವಿವೋ ಯಶಸ್ವಿಯಾಗಿ ಸುರಕ್ಷಿತ ಮತ್ತು ಅರ್ಥಗರ್ಭಿತ ಇನ್-ಡಿಸ್‌ಪ್ಲೇಯ ಬೆರಳಚ್ಚು ಶೋಧಕ ತಂತ್ರಜ್ಞಾನವನ್ನು ಅಳವಡಿಸಿದೆ. ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ ಮೊಟ್ಟ ಮೊದಲ ವೈಶಿಷ್ಟ ಇದಾಗಿದೆ ಎಂಬುದನ್ನು ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದರು.
ಉದ್ಯಮದ ಮೊಟ್ಟ ಮೊದಲ ಪ್ರದರ್ಶನ ಕಂಡ ವಿವೋ ಎಕ್ಸ್21 ಅಧುನಿಕ ತಂತ್ರಜ್ಞಾನದಲ್ಲಿ ವಿಶ್ವದ ಗಮನ ಸೆಳೆದಿದೆ. ಗ್ರಾಹಕರಿಗೆ ಹೆಚ್ಚು ಸುರಕ್ಷಿತ ಹಾಗೂ ಭದ್ರತೆಯುಳ್ಳ ಸ್ಮಾರ್ಟ್‌ಫೋನಾಗಿದ್ದಲ್ಲದೆ, ತನ್ನ ವಿಚ್ಛಿದ್ರಕಾರಕ ಅನಾಕಿಂಗ್ ತಂತ್ರಜ್ಞಾನದೊಂದಿಗೆ ಉದ್ಯಮವನ್ನು ಮುನ್ನಡೆಸುತ್ತಿದೆ.
ವಿಶೇಷಣಗಳು: 15.95 ಸೆಂ.ಮಿ. (6.28) ಎಫ್‌ಎಚ್‌ಡಿ ಪ್ಲಸ್, ಡ್ನೂಯಲ್ ರಿಯರ್ ಕ್ಯಾಮೆರಾ (12ಎಂಪಿ ಪ್ಲಸ್ 5ಎಂಪಿ), 12ಎಂಪಿ ಸೆಲ್ಫಿ ಕ್ಯಾಮೆರಾ, 19.9 ಫುಲ್‌ವೂ ಡಿಸ್‌ಪ್ಲೇ, ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 660 ಅಕ್ಟಾ ಕೋರ್, 6ಜಿಬಿ ರ್ಯಾಮ್, 128ಜಿಬಿ ರೋಮ್, 3200ಎಂಎಹೆಚ್ ಬ್ಯಾಟರಿ, ಆ್ಯಂಡ್ರಾಯ್ಡ 8.1 ಮುಂತಾದ ವಿಶೇಷಣಗಳನ್ನು ಹೊಂದಿದೆ.
ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿರುವ ಈ ಫೋನ್ ದರ 35,990 ರೂ.ಗಳಾಗಿದ್ದು, ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯ. ಇನ್ನು ಕೆಲವೇ ಕೆಲವು ಆಯ್ದ ಮಳಿಗೆಗಳಲ್ಲೂ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.