Advertisement

ಜುಲೈ 15ಕ್ಕೆ ವಿವೋ ವೈ72 5 ಜಿ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯ

04:45 PM Jul 13, 2021 | Team Udayavani |

ನವದೆಹಲಿ: ವಿವೋ ಮೊಬೈಲ್‌ನ ಹೊಸ ಮಾದರಿಯ ಫೋನ್‌ , ವೈ725ಜಿ ಜು.15ಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ಹೊಸ ಮೊಬೈಲ್‌ನ ಫೋಟೋಗಳೂ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

Advertisement

ಇದನ್ನೂ ಓದಿ:ಪಣಂಬೂರು : ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ, 248 ಗ್ರಾಂ ಚಿನ್ನ ವಶ

ಹೊಸ ಮೊಬೈಲ್‌ನಲ್ಲಿ 8ಜಿಬಿ ರಾಮ್‌, ಜತೆಗೆ 15ಕ್ಕೆ ಸಿಗಲಿದೆ ವಿವೋ ವೈ72 5 ಜಿಲ ಈ ಸ್ಮಾರ್ಟ್ ಫೋನ್ ಮೀಡಿಯಾಟಿಕ್ ಡೈಮೆನ್ಸಿಟಿ 800 u MT6853v ಪ್ರೊಸೆಸರ್ ಹೊಂದಿದ್ದು, ಆ್ಯಂಡ್ರಾಯ್ಡ್ 11 ಫೀಚರ್ಸ್ ನಲ್ಲಿ ಕಾರ್ಯನಿರ್ವಹಿಸಲಿದೆ. 128 ಜಿಬಿ ಇಂಟರ್ ಸ್ಟೋರೇಜ್ ಸಾಮರ್ಥ್ಯ ಹೊಂದಿರುವುದಾಗಿ ಹೇಳಿದೆ.

ಡೆಡ್‌ RAM ಫೀಚರ್‌ ಇರಲಿದೆ. ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಫೋನ್‌ನಲ್ಲಿ ಆ್ಯಂಡ್ರಾಯ್ಡ್ 11 ಆಧಾರಿತ ಫ‌ನ್‌ಟಂಚ್‌ ಒಎಸ್‌ 11.1 ಇರಲಿದೆಯಂತೆ.

ಮೆಮೊರಿ ಕಾರ್ಡ್ ಬಳಸಿ 1 ಟಿಬಿವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಇದರಲ್ಲಿ ಮುಖ್ಯ ಕೆಮರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕೆಮರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕೆಮರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮ್ಯಾಕ್ರೋ ಲೆನ್ಸ್ ಹೊಂದಿದೆ.

Advertisement

ಎಚ್‌ಡಿಎಫ್ ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೊಟಕ್‌ ಮಹೀಂದ್ರಾ ಬ್ಯಾಂಕ್‌ ಮೂಲಕ ಖರೀದಿ ಮಾಡುವುದಿದ್ದರೆ 1,500 ರೂ. ನಗದು ರಿಯಾಯಿತಿ ಇರಲಿದೆ. 20 ಸಾವಿರ ರೂ. ಒಳಗೆ ಅದರ ಬೆಲೆ ಇರುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next