Advertisement

ವಿವೋ ಕಂಪೆನಿಯಿಂದ ಶೇ.50 ಲಾಭ ಚೀನಗೆ ರಹಸ್ಯ ರವಾನೆ : 62 ಸಾವಿರ ಕೋಟಿ ರೂ. ಅಕ್ರಮ ವರ್ಗಾವಣೆ

08:15 AM Jul 08, 2022 | Team Udayavani |

ಹೊಸದಿಲ್ಲಿ: ಚೀನ ಮೂಲದ ವಿವೋ ಕಂಪೆನಿಯು ಭಾರತದಲ್ಲಿ ತಾನು ಗಳಿಸಿರುವ ಶೇ. 50ರಷ್ಟು ಹಣವನ್ನು ಚೀನಕ್ಕೆ ವರ್ಗಾಯಿಸಿ, ಆ ಮೂಲಕ ಭಾರತದಲ್ಲಿ ತೆರಿಗೆ ಕಟ್ಟುವುದರಿಂದ ನುಣುಚಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

“ಭಾರತದಲ್ಲಿರುವ ವಿವೋ ಶಾಖೆ ಇಲ್ಲಿ ಬಂದಿದ್ದ ಆದಾಯದಲ್ಲಿ 62,476 ಕೋಟಿ ರೂ.ಗಳನ್ನು ಚೀನಕ್ಕೆ ರಹಸ್ಯವಾಗಿ ರವಾನಿಸಿದೆ. ಆ ಮೂಲಕ ಭಾರತದಲ್ಲಿ ತನಗೆ ಭಾರೀ ಪ್ರಮಾಣದ ನಷ್ಟವಾಗಿರುವುದಾಗಿ ತೋರಿಸಿ ಕೊಂಡು ತೆರಿಗೆ ತಪ್ಪಿಸಿಕೊಳ್ಳುವ ನಾಟಕವಾಡಿದೆ’ ಎಂದು ಈ ಪ್ರಕರಣ ಪತ್ತೆ ಹಚ್ಚಿರುವ ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಕಂಪೆನಿ ವಿರುದ್ಧ ಹಣಕಾಸು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ, ಭಾರತದಲ್ಲಿನ ವ್ಯವಹಾರಗಳಿ ಗಾಗಿ ಬಳಸುತ್ತಿದ್ದ 119 ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವು ಗಳಲ್ಲಿ 465 ಕೋಟಿ ರೂ.ಗಳಷ್ಟು ವ್ಯವ ಹಾರಗಳು ತಟಸ್ಥಗೊಂಡಿದ್ದು, ಖಾತೆ ಗ ‌ಳಲ್ಲಿನ 73 ಲಕ್ಷ ರೂ. ನಗದು ಹಾಗೂ 2 ಕೆ.ಜಿ. ಚಿನ್ನವನ್ನೂ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ತಿಳಿಸಿದೆ.

ನಿರ್ದೇಶಕ ಪರಾರಿ
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೇಶದ 40 ಕಡೆ ಇ.ಡಿ. ಶೋಧ ಕಾರ್ಯ ನಡೆಸುತ್ತಿದ್ದಂತೆಯೇ, ವಿವೋ ನಿರ್ದೇಶಕರಾದ ಝೆಂಗೆÏನ್‌ ಔ ಮತ್ತು ಝಾಂಗ್‌ ಜೈ ಅವರು ದೇಶಬಿಟ್ಟು ಪರಾರಿಯಾಗಿದ್ದಾರೆ. ದಾಳಿ ಬೆನ್ನಲ್ಲೇ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next