Advertisement

ಕನ್ಯಾಕುಮಾರಿಯ ವಿವೇಕಾನಂದ ರಾಕ್!  ಇಲ್ಲಿದೆ ವಿವೇಕಾನಂದರ ಜೀವನ ಕಥನ

09:54 AM Jan 13, 2020 | keerthan |

ಕನ್ಯಾಕುಮಾರಿ: ಭಾರತದ ದಕ್ಷಿಣ ಅಂಚಿನಲ್ಲಿ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳದಲ್ಲಿರುವ ಕ್ಷೇತ್ರ ಕನ್ಯಾಕುಮಾರಿ. ಇಲ್ಲಿಗೆ ಸೂರ್ಯೋದಯ, ಸೂರ್ಯಾಸ್ಥಗಳ ದೃಶ್ಯಗಳನ್ನು ನೋಡಲೆಂದೇ ಲಕ್ಷಾಂತರ ಜನ ಸೇರುತ್ತಾರೆ.

Advertisement

ಭೂಶಿರದಲ್ಲಿ ಸಮುದ್ರಕ್ಕೆ ಎದುರಾಗಿ ದಂಡೆಯ ಮರಳಿನ ಮೇಲೆ ಕುಳಿತು ದೃಷ್ಟಿ ಹರಿದಷ್ಟು ಹಾಯಿಸಿ ನಿರ್ಮಲ ಆಕಾಶ ಹಾಗೂ ಸಮುದ್ರದ ಅಲೆಗಳನ್ನು ವೀಕ್ಷಿಸಿ ಆನಂದಿಸುವ ಸಂಭ್ರಮ ಅವರ್ಣನೀಯ.

ಕನ್ಯಾಕುಮಾರಿ ದೇವಾಲಯದಿಂದಾಗಿ ಈ ಊರಿಗೆ ಅದೇ ಹೆಸರು ಬಂದಿದೆ. ಇಷ್ಟಲ್ಲದೆ ಇಲ್ಲಿ ಮಾತೃ ತೀರ್ಥ, ಪಿತೃ ತೀರ್ಥ, ಗಾಯತ್ರಿ ತೀರ್ಥ ಹಾಗೂ ಸಾವಿತ್ರಿ ತೀರ್ಥಗಳಿವೆ.

ವಿವೇಕಾನಂದ ರಾಕ್ ಮೆಮೋರಿಯಲ್
ದೇಶದ ದಕ್ಷಿಣದ ತುತ್ತತುದಿಯಲ್ಲಿ ಕನ್ಯಾಕುಮಾರಿಯಿಂದ ಸುಮಾರು 400 ಮೀಟರ್ ದೂರದಲ್ಲಿ ಹಿಂದೂ ಮಹಾಸಾಗರದಲ್ಲಿರುವ ಬಂಡೆಗಳ ಮೇಲೆ ವಿವೇಕಾನಂದ ರಾಕ್ ಮೆಮೋರಿಯಲ್ ನಿಂತಿದೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಧ್ಯಾನಾಸಕ್ತರಾಗಿ ಕುಳಿತಿದ್ದರ ಸವಿ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

ಈ ಸ್ಮಾರಕದಲ್ಲಿ ವಿವೇಕಾನಂದರ ಪೂರ್ಣಾಕಾರದ 2.2 ಮೀಟರ್ ಎತ್ತರದ ಕಂಚಿನ ವಿಗ್ರಹವಿದೆ.  ನೆಲಮಾಳಿಗೆಯಲ್ಲಿ ಧ್ಯಾನ ಮಂದಿರವಿದೆ. ಇಲ್ಲಿಗೆ ಬೋಟ್ ಮೂಲಕ ಹೋಗಬಹುದಾಗಿದೆ.

Advertisement

ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಜೀವನ ಹಾಗೂ ಸಾಧನೆಗಳ ಬಗ್ಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವಿದೆ.ಇಲ್ಲಿ ವಿವೇಕಾನಂದರ ಜೀವನ ಚಿತ್ರಣ ಹಾಗೂ ಉಬ್ಬು ಶಿಲ್ಪಗಳ ರಚನೆ ಇದೆ. ಇಲ್ಲಿಗೆ ಪ್ರವೇಶ ಶುಲ್ಕ ₹ 10 ಮಾತ್ರ.

ಕನ್ಯಾಕುಮಾರಿ ತೀರದಲ್ಲಿ ಮತ್ತೊಂದು ಬಂಡೆಯ ಮೇಲಿರುವ ತಮಿಳು ಮಹಾಕವಿ ತಿರುವಳ್ಳುವರ್ ಅವರ 133 ಅಡಿ ಕಾಂಕ್ರೀಟ್‍ನಲ್ಲಿ ನಿರ್ಮಿಸಿರುವ ಬೃಹತ್‍ ವಿಗ್ರಹವಿದೆ.

ಶುಚೀಂದ್ರಂ
ಕನ್ಯಾಕುಮಾರಿಗೆ 13 ಕಿ.ಮೀ.ದೂರದಲ್ಲಿ ಶುಚೀಂದ್ರಂ ಇದೆ.  ಇಲ್ಲಿ 18 ಅಡಿ ಎತ್ತರದ ಬೃಹತ್  ಹನುಂತನ ಪ್ರತಿಮೆ ಗಮನ ಸೆಳೆಯುತ್ತದೆ.  ಶಿವ ದೇವಾಲಯದಲ್ಲಿ ಸ್ಥಾಣಮಲ ಎಂಬ ಲಿಂಗವಿದೆ.

ಕಂಚಿ ಕಾಮ ಕೋಟಿ ಪೀಠ
ಇಲ್ಲಿ ಕಂಚಿ ಕಾಮಕೋಟಿ ಪೀಠವೂ ಜನರ ಆಕರ್ಷಣೀಯಗಳಲ್ಲಿ ಒಂದು.ಇಲ್ಲಿ ಪ್ರವೇಶ ಶುಲ್ಕ 20₹

ಕಡಿಮೆ ಹಣದಲ್ಲಿ ಶಾಂಪಿಂಗ್
ಕನ್ಯಾಕುಮಾರಿ ಯಲ್ಲಿ ಶಾಪಿಂಗ್ ಮಾಡುವವರಿಗೆ ಒಳ್ಳೆಯ ಸ್ಥಳ.ಅತೀ ಕಡಿಮೆ ಬೆಲೆಗೆ ಬಟ್ಟೆ, ಬರೆ ಹಾಗೂ ಫ್ಯಾನ್ಸಿ ಐಟಂ, ಎಲೆಕ್ಟ್ರಾನಿಕ್ ವಸ್ತುಗಳು ದೊರಕುತ್ತದೆ. ಜತೆಗೆ ಸಮುದ್ರದಲ್ಲಿರುವ ಶಂಖ,ಮುತ್ತು ,ಚಿಪ್ಪು ಮೊದಲಾದ ವಸ್ತುಗಳು ದೊರಕುತ್ತದೆ.ಡಿಸೆಂಬರ್- ಜನವರಿಯಲ್ಲಿ ಹಾಗೂ ಎಪ್ರಿಲ್-ಮೇನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ.

ಪ್ರವೀಣ್ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next