Advertisement
ಆ್ಯಪ್ ಬಿಡುಗಡೆಗೊಳಿಸಿದ ಪತ್ರಕರ್ತ ಡಾ| ಯು. ಪಿ. ಶಿವಾನಂದ ಮಾತನಾಡಿ, ವಿದ್ಯೆಯಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ನಿದ್ರೆ ಮತ್ತು ಸುಖದ ಹಂಬಲವಿರಬಾರದು. ಬೆರಳ ತುದಿಯಲ್ಲೇ ಸಿಗುವ ಮಾಹಿತಿಗಳು ಮನುಕುಲದ ಅಭಿವೃದ್ಧಿಗಾಗಿ ಬಳಕೆಯಾಗಬೇಕು. ಪದವಿಪೂರ್ವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸಿದ ಈ ಆ್ಯಪ್‌ನ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಪ್ರಾಂಶುಪಾಲ ಡಾ| ಎಂ. ಎಸ್. ಗೋವಿಂದೇಗೌಡ ಗ್ರಾಮೀಣ ಭಾಗದ ಪ.ಪೂ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದನ್ನು ತಯಾರಿಸಲಾಗಿದ್ದು, ಪ್ರತಿದಿನ ಗಣಿತ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯಗಳ ಮೂರು ಮೂರು ಪ್ರಶ್ನೆಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಇದಕ್ಕೆ ವಿದ್ಯಾರ್ಥಿಯು ಉತ್ತರಿಸುವ ಮೂಲಕ ತನ್ನ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು. ಡಿ. 25 ರಿಂದ ಆರಂಭವಾಗಿ ಸಿ.ಇ.ಟಿ. ಪರೀಕ್ಷೆಯವರೆಗೆ ಇದರಲ್ಲಿ ಪ್ರಶ್ನೆಗಳು ಲಭ್ಯವಿರುತ್ತವೆ ಎಂದು ತಿಳಿಸಿದ್ದಾರೆ. ಗೌರವ
ಆ್ಯಪ್ ತಯಾರಿಸಿದ ಕಾಲೇಜಿನ ಉಪನ್ಯಾಸಕ ಪ್ರೊ| ರಾಘವೇಂದ್ರ ಕಟಗಲ್, ವಿದ್ಯಾರ್ಥಿಗಳಾದ ದ್ವಾರಕಾನಾಥ್ ಮತ್ತು ಸಂದೇಶ್ ಅವರನ್ನು ಗೌರವಿಸಲಾಯಿತು. ಉಪನ್ಯಾಸಕ ಡಾ| ಪ್ರಸಾದ್ ಎನ್. ಬಾಪಟ್ ಸ್ವಾಗತಿಸಿ, ಪ್ರೊ| ವಿವೇಕ್ ರಂಜನ್ ಭಂಡಾರಿ ವಂದಿಸಿದರು.
Related Articles
Advertisement