ಕುದೂರು: ಆಧ್ಯಾತ್ಮಿಕ ಚೇತನ ಸ್ವಾಮಿ ವಿವೇಕಾನಂದರಿಂದ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿ ವಿಶ್ವದಲ್ಲಿ ಭಾರತದ ಕೀರ್ತಿ ಪಸರಿಸಿತುಎಂದು ಕುದೂರು ಮಾಧ್ಯಮ ಬಳಗದ ಅಧ್ಯಕ್ಷ ಗಂ.ದಯಾನಂದ್ ಹೇಳಿದರು.
ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುದೂರು ಮಾಧ್ಯಮಬಳಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 157 ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಯುವ ಜನತೆಗೆ ವಿವೇಕಾನಂದರ ಆದರ್ಶಗಳು ದಾರಿ ದೀಪವಾಗಿದ್ದು, ಯುವಕರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜ ಸೇವಕ ಕೆಂಚೇಗೌಡ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರಂತಹ ಆಧ್ಯಾತ್ಮಿಕ ಹಾಗೂ ಗಣ್ಯ ವ್ಯಕ್ತಿಗಳ ಜೀವನ ಪರಿಚಯ ಮಾಡಿಕೊಡುವ ಮೂಲಕ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದರು.
ಪ್ರಾಂಶುಪಾಲ ವಿಜಯಕುಮಾರ್, ಮಾನವನ ಸೇವೆಯೇ ನಿಜವಾದಧರ್ಮ ಎಂದು ವಿಶ್ವಕ್ಕೆ ಸಾರಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು ಭಾರತದ ಸರ್ವ ಧರ್ಮ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮೊದಲ ಸಂತ ಎಂದು ಹೇಳಿದರು.
ಈ ವೇಳೆ ಮಾಧ್ಯಮ ಬಳಗದರ ಕಾರ್ಯದರ್ಶಿ. ಕೆ.ಎಸ್.ಮಂಜುನಾಥ್, ಖಜಾಂಚಿ ಆರ್.ಮಹೇಶ್, ಶಿವಶಂಕರ್, ಉಪನ್ಯಾಸಕರಾದ ರಾಘವೇಂದ್ರ, ಸುರೇಶ್, ಹುನುಮಂತರಾಯಪ್ಪ, ದೇವ ರಾಜು, ಕೃಷ್ಣವೇಣಿ, ಗ್ರಾಪಂ. ಸದಸ್ಯ ಉಮಾಶಂಕರ್, ಶೇಖರ್ ಸೇರಿ ದಂತೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತರರು ಹಾಜರಿದ್ದರು.