Advertisement

ಆತ್ಮ ವಿಶ್ವಾಸದ ಇನ್ನೊಂದು ಹೆಸರೇ ವಿವೇಕಾನಂದ

09:43 PM Jan 13, 2022 | Team Udayavani |

ಮೈಸೂರು: ಸ್ವಾಮಿ ವಿವೇಕಾನಂದರ ಜೀವನ, ಸಾಧನೆ ಸಂದೇಶ ಹಾಗೂ ಸಹಜವಾದ ಆಲೋಚನೆಯಿಂದ ಬಯಮುಕ್ತ ವಾತಾವರಣ ಸೃಷ್ಟಿಸಬೇಕು ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್‌.ಶಿವಪ್ಪ ಹೇಳಿದರು. ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಬುಧ ವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾ ಚರಣೆ ಸಪ್ತಾಹ ಹಾಗೂ ಸೋಮಾನಿ ಸಂಭ್ರಮ-2022 ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಯುವಕರಲ್ಲಿ ಆತ್ಮವಿಶ್ವಾಸದ ಇನ್ನೊಂದು ಹೆಸರು ಸ್ವಾಮಿ ವಿವೇಕಾನಂದರು. ಯಾವುದೇ ವ್ಯಕ್ತಿ ಆತ್ಮವಿಶ್ವಾಸ ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ. ಅಂತಹ ಆತ್ಮವಿಶ್ವಾಸವನ್ನು ಯುವಕರ ಎದೆಯಲ್ಲಿ ಬೆಳಗಿದವರು ಸ್ವಾಮಿ ವಿವೇಕಾನಂದರು. ಯುವ ಜನರ ಬಗ್ಗೆ ಅಚಲವಾದ ವಿಶ್ವಾಸ, ನಂಬಿಕೆ ಹೊಂದಿದ್ದರು. ಅವರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ಧನಾತ್ಮಕ ಚಿಂತನೆಗಳ ಮೂಲಕ ಸಮಸ್ಯೆ, ಸವಾಲುಗಳನ್ನು ಎದುರಿಸಬೇಕು. ಸದೃಢ ದೇಹ ಮತ್ತು ಸಕಾರಾತ್ಮಕ ಭಾವನೆ ರೂಢಿಸಿಕೊಂಡು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿರಿಯ ಪ್ರಾಧ್ಯಾಪಕ ಎಸ್‌.ಸುದರ್ಶನ್‌ ಮಾತನಾಡಿ, ಶಿಕ್ಷಣವೆಂಬುದು ನಿಮ್ಮಲ್ಲಿರುವ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುತ್ತದೆ. ಅದೇ ರೀತಿ ಸ್ವತ್ಛತೆ, ತಾಳ್ಮೆ ಹಾಗೂ ಸೇವೆಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಹೃದಯವಂತಿಕೆಯಿಂದ ನಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಐಇಟಿಯ ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಎಂ ಪುಟ್ಟಸ್ವಾಮಿ, ರಾಷ್ಟ್ರ ನಿರ್ಮಾಣದಲ್ಲಿ ಆರೋಗ್ಯಕರ ಸಮಾಜ ರೂಪಿಸುವಲ್ಲಿ ಯುಜನತೆಯ ಪಾತ್ರ ಮಹತ್ವವಾದುದು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ, ವಿವೇಕಾನಂದರ ಬಾಲ್ಯ, ಯೌವ್ವನದ ಜೀವನಗಾಥೆಯನ್ನು ವಿವರಿಸಿದರು. ಕಾರ್ಯದರ್ಶಿ ಹಾಗೂ ಮ್ಯಾನೇಜಿಂಗ್‌ ಟ್ರಸ್ಟಿ ಕುಬೇರ್‌ ಪಿ.ಗೌಡ, ಅಧ್ಯಾಪಕರು, ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next