Advertisement

ವಿಶ್ವಕ್ಕೆ ಹಿಂದೂ ಧರ್ಮ ತಿಳಿಸಿಕೊಟ್ಟ ಮಹಾನ್‌ ಪುರುಷ ವಿವೇಕಾನಂದ

12:21 PM Jan 13, 2018 | Team Udayavani |

ಬನ್ನೂರು: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತದ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಕೆರಳಿಸುವ ಮೂಲಕ ಅದರ ತಾತ್ವಿàಕ ಮತ್ತು ಮೂಲಭೂತ ಮಹತ್ವದ ಸಂಪ್ರದಾಯವನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್‌ ಪುರುಷ ಸ್ವಾಮಿ ವಿವೇಕಾನಂದರು ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರ ಸಿಂಗ್‌ಕಾಳಪ್ಪ ತಿಳಿಸಿದರು.

Advertisement

ಬನ್ನೂರಿನ ಬಿಜಿಎಸ್‌ ಕಾಲೇಜಿನಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನ ಕಾರ್ಯಕ್ರಮವನ್ನು ದೀಪ ಬೆಳೆಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನ್ಯೂಯಾರ್ಕ್‌ ಹಾಗೂ ಲಂಡನ್‌ನಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ, ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿದು, ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಅವರ ಚಿಂತನೆಯಲ್ಲಿ ವೈಯಕ್ತಿಕ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೆ ಪ್ರಬುದ್ಧ ವ್ಯಕ್ತಿ ಎಂದು ಹೇಳುವ ಮೂಲಕ,  ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ ಇರಬಾರದು ಎಂದು ಹೇಳಿದಂತ ಮಹಾನ್‌ ಜಾnನಿ ಎಂದು ತಿಳಿಸಿದರು. 

ಸನ್ಯಾಸಿಯಾಗಿ ದೇವರ ಸೇವೆಯನ್ನು ಹೇಗೆ ಮಾಡಬಹುದು ಎಂದು ತಿಳಿಸಿಕೊಟ್ಟರು. ಅತ್ಯಂತ ಕಿರಿಯ ಪ್ರಾಯದಲ್ಲಿ ಹೆಚ್ಚಿನ ದೂರದೃಷ್ಟಿಯ ವಿಚಾರಧಾರೆಯನ್ನು ಹೊಂದಿದ್ದ ವ್ಯಕ್ತಿ ಇವರಾಗಿದ್ದು, ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ನರೇಂದ್ರನಾಥದತ್ತ ಎಂಬ ಪೂರ್ವದ ಹೆಸರು ವಿವೇಕಾನಂದರಾಗಿ ಬದಲಾಯಿತು ಎಂದು ತಿಳಿಸಿದರು.

ಅವರ ಹಾದಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ನಡೆಯುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು. ಆನಂದ್‌, ಪಲ್ಲವಿ, ಅಶ್ವಥ್‌ ಸೇರಿದಂತೆ ಶಾಲಾ ಮತ್ತು ಕಾಲೇಜಿನ ಉಪನ್ಯಾಸಕರು ಹಾಗೂ ಶಿಕ್ಷಕ ವೃಂದದವರು, ಆಡಳಿತ ಮಂಡಳಿಯ ಸದಸ್ಯರು ಹಲವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next