Advertisement

ನಾಡಿನ ಸಂಸ್ಕೃತಿ ನಶಿಸದಂತೆ ಎಚ್ಚರ ವಹಿಸಿ

05:42 PM Jan 13, 2020 | Suhan S |

ಮಾಗಡಿ: ರಾಜಕಾರಿಣಿಗಳು, ಶಿಕ್ಷಕರು ವಿದ್ಯಾವಂತರು ಎಂದೂ ವಿವೇಕ ಕಳೆದುಕೊಳ್ಳಬಾರದು. ಯಾರೇ ತಪ್ಪು ಮಾಡಿದರೂ, ಖಂಡಿಸುವ ಗುಣ ಬೆಳಸಿ ಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆ.ದೇವೇಗೌಡ ತಿಳಿಸಿದರು.

Advertisement

ತಾವರೆಕೆರೆಯಲ್ಲಿನ ಜಿನ್ನಾಂಬ ಹಾಲ್‌ನಲ್ಲಿ ಎಂ.ನೀಲಯ್ಯ ಅವರ ಹಿತೈಷಿಗಳ ಸಭೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾವಂತ ವಿದ್ಯಾವಂತರು ನಾಡಿನ ಭಾಷಾ ಸಂಸ್ಕೃತಿ ನಶಿಸದಂತೆ ಎಚ್ಚರ ವಹಿಸಬೇಕು. ನಮ್ಮ ಸಂಸ್ಕೃತಿಯನ್ನು ಬಿಟ್ಟು ಅನ್ಯ ಸಂಸ್ಕೃತಿಯ ಕಡೆ ಎಂದೂ ಮನಸ್ಸು ಮಾಡಬಾರದು. ಮನಸ್ಸು ಜಾಗೃತಿಗೊಳಿಸಿಕೊಳ್ಳುವಂತಹ ಗುರಿ ನಮ್ಮದಾಗಬೇಕು. ನಮ್ಮನ್ನು ರಕ್ಷಣೆ ಮಾಡುವ ಸೈನಿಕ ಮತ್ತು ಅನ್ನ ನೀಡುವ ರೈತರನ್ನು ಸ್ಮರಣೆ ಮಾಡಬೇಕೆಂದರು.

ಬೆಂಗಳೂರು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ ಮಾತನಾಡಿ, ಸಂಸ್ಕೃತಿ ಉಳಿಯಬೇಕಾದರೆ, ಕೃತಿ ಮನಸ್ಸುಗಳು ಬದಲಾಗಬೇಕು. ಜಾತಿ ಸಂಕೋಲೆಯಿಂದ ಹೊರಬರಬೇಕು. ಎಲ್ಲಾ ಧರ್ಮದ ಸಂದೇಶವೂ ಒಂದೇ ಆಗಿರುತ್ತದೆ. ಆದರೂ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಎತ್ತಿಡಿ ಯಬೇಕು ಹಾಗೂ ಸಮಾಜದ ಏಳಿಗೆಗೆ ಪ್ರಮಾಣಿಕವಾಗಿ ದುಡಿಯಬೇಕು ಎಂದು ಯುವ ಜನತೆಗೆ ಕರೆ ಕೊಟ್ಟರು.  ಡಿಜಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್‌ ಸ್ವಾಮಿ ವಿವೇಕನಂದರ ಕುರಿತು ಉಪನ್ಯಾಸ ನೀಡಿದರು.

ಎಂಎಲ್ಸಿ ಸ್ಪರ್ಧಾಕಾಂಕ್ಷಿ ತಾ.ಸ. ನೌಕರರ ಸಂಘದ ಅಧ್ಯಕ್ಷ ಶಿವರಾ ಮಯ್ಯ, ಮುಖಂಡರಾದ ನಂದೀಶ್‌, ನಂದ ಶಿವಯ್ಯಂ, ಎನ್‌ಜಿಓ ಜಯ ರಾಮ, ಪ್ರೌಢಶಾಲಾ ಶಿಕ್ಷಕರ ಸಂಘದ ಮಹಾಲಿಂಗಯ್ಯ, ನರಸೇಗೌಡ, ನಿಂಗಯ್ಯ, ಚಿಕ್ಕರಯ್ಯ, ಕೆಂಪೇಗೌಡ, ಮಲ್ಲಿಕಾರ್ಜುನಯ್ಯ, ಬಿ.ಎನ್‌.ಚಂದ್ರ ಶೇಖರ್‌, ಬೋಗಣ್ಣ, ಸುರೇಶ್‌, ಚಂದ್ರ ಶೇಖರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next