ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿರುವ ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರ ಜನಪ್ರಿಯತೆ ಮತ್ತು ಆನ್‌ಲೈನ್ ದೇಣಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ.
ಗುರುವಾರ ನಡೆದ ಚೊಚ್ಚಲ ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚೆಯ ನಂತರ ಈ ಬೆಳವಣಿಗೆ ನಡೆದಿದೆ. ಚರ್ಚೆ ನಡೆದ ಒಂದು ಗಂಟೆಯಲ್ಲಿ ವಿವೇಕ್ ರಾಮಸ್ವಾಮಿ (38) ಅವರಿಗೆ 4,50,000 ಡಾಲರ್ ದೇಣಿಗೆ ಹರಿದುಬಂದಿದೆ.
ರಿಪಬ್ಲಿಕನ್ ಪಕ್ಷದ ಇತರೆ ಅಕಾಂಕ್ಷಿಗಳಾದ ನ್ಯೂಜೆರ್ಸಿ ಮಾಜಿ ರಾಜ್ಯಪಾಲ ಕ್ರಿಸ್ ಕ್ರಿಸ್ಟೀಸ್, ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ಹಾಗೂ ದಕ್ಷಿಣ ಕೆರೊಲಿನಾ ರಾಜ್ಯಪಾಲೆ ನಿಕ್ಕಿ ಹ್ಯಾಲೆ ಅವರಿಗಿಂತ ಜನಪ್ರಿಯತೆಯಲ್ಲಿ ವಿವೇಕ್ ಮುಂದಿದ್ದಾರೆ. ಆಕ್ಸಿಸ್ ವರದಿಯ ಪ್ರಕಾರ, ಚರ್ಚೆಯಲ್ಲಿ ವಿವೇಕ್ ಅತ್ಯುತ್ತಮವಾಗಿ ವಿಷಯ ಮಂಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇ.28ರಷ್ಟು ಜನರು ತಿಳಿಸಿದ್ದಾರೆ.
ಅದೇ ರೀತಿ ಫ್ಲೋರಿಡಾ ರಾಜ್ಯಪಾಲ ರಾನ್ ಡಿಸಾಂಟಿಸ್ ಪರವಾಗಿ ಶೇ.27 ಹಾಗೂ ಪೆನ್ಸ್ ಪರವಾಗಿ ಶೇ.13 ಪ್ರತಿಕ್ರಿಯೆಗಳು ಬಂದಿವೆ.