ವಾಷಿಂಗ್ಟನ್/ಲಂಡನ್:ಭಾರತೀಯ-ಅಮೆರಿಕನ್ ವಿವೇಕ್ ರಾಮಸ್ವಾಮಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೂಡಿ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ಹೀಗಾಗಿ, ರಿಪಬ್ಲಿಕನ್ ಪಕ್ಷದ ವತಿಯಿಂದ ಉಪಾಧ್ಯಕ್ಷ ಹುದ್ದೆಗೂ ಸ್ಪರ್ಧಿಸುವ ಇಂಗಿತವನ್ನೂ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‌ನ “ಜಿಬಿ ನ್ಯೂಸ್’ ಎಂಬ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಸುಳಿವು ನೀಡಿದ್ದಾರೆ. ತಾವು ಅಧ್ಯಕ್ಷ ಪದವಿಯನ್ನು ಏರಿದರೆ ದೇಶವನ್ನು ಮತ್ತೂಮ್ಮೆ ಒಗ್ಗೂಡಿಸಿ ಮುಂದುವರಿಯುವುದಾಗಿ ಹೇಳಿಕೊಂಡಿದ್ದಾರೆ.
ಒಂದು ವೇಳೆ ಸಾಧ್ಯವಿದ್ದರೆ ಟ್ರಂಪ್ ಜತೆಗೆ ಒಂದೇ ಟಿಕೆಟ್‌ನಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಗಳೂ ಇಲ್ಲದೇ ಇಲ್ಲ ಎಂದರು. ಕೆಲ ದಿನಗಳ ಹಿಂದಷ್ಟೇ ಅವರು ಅಧ್ಯಕ್ಷೀಯ ಪದವಿಯ ಹೊರತಾಗಿ ಇತರ ಹುದ್ದೆಗಳಲ್ಲಿ ಆಸಕ್ತಿ ಇಲ್ಲವೆಂದು ಹೇಳಿ ಸುದ್ದಿಯಾಗಿದ್ದರು.