ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್, ಉದ್ಯಮಿ ವಿವೇಕ್ ರಾಮಸ್ವಾಮಿ ಅವರಿಗೆ ಟ್ರಂಪ್ 2.0 ಸರಕಾರದಲ್ಲಿ ಮಹತ್ವದ ಹುದ್ದೆ ದೊರಕಿದೆ. ಟೆಸ್ಲಾ ಮಾಲಕ ಎಲಾನ್ ಮಸ್ಕ್ ಅವರ ಜತೆ ಸೇರಿ ಇವರು ಅಮೆರಿಕ ಸರಕಾರದ ಕಾರ್ಯಕ್ಷಮತೆ ಮೇಲುಸ್ತುವಾರಿ ಇಲಾಖೆ ಯನ್ನು ಮುನ್ನಡೆಸಲಿದ್ದಾರೆ.
“ಸೇವ್ ಅಮೆರಿಕ ಚಳವಳಿಗೆ ಅಗತ್ಯವಾಗಿರುವ ಅಧಿಕಾರಶಾಹಿ ಪ್ರವೃತ್ತಿಯನ್ನು ತೆಗೆದುಹಾಕಲು ಈ ಇಬ್ಬರು ಅದ್ಭುತ ಅಮೆರಿಕನ್ನರು ನೆರವಾಗಲಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.
ರಕ್ಷಣ ಸಚಿವರಾಗಿ ಹೆಗ್ಸೆತ್: ಖ್ಯಾತ ನಿರೂಪಕ ಮತ್ತು ಸೈನಿಕ ಪೀಟರ್ ಹೆಗ್ಸೆತ್ ಅವರನ್ನು ಅಮೆರಿಕ ರಕ್ಷಣ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ ಜಾನ್ ರ್ಯಾಟ್ಕ್ಲಿಫ್ ಅವರನ್ನು ಸಿಐಎ ಮುಖ್ಯಸ್ಥರಾಗಿ ನೇಮಿಸಲಾಗಿದೆ.
ವಿವೇಕ್ ಅತೃಪ್ತಿ
ಟ್ರಂಪ್ ಘೋಷಣೆ ಬೆನ್ನಲ್ಲೇ ಟ್ವೀಟ್ ಮಾಡಿರುವ ವಿವೇಕ್, “ಇದು ಸಾಗಲು ಸಾಧ್ಯವಿಲ್ಲ’ ಎಂದಿದ್ದಾರೆ. ಈ ಮೂಲಕ ಅವರು ಮಸ್ಕ್ ಜತೆ ಕೆಲಸ ಮಾಡಲು ಅಸಮ್ಮತಿ ಸೂಚಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿವೆ. ಅಲ್ಲದೇ ಒಂದೇ ಹುದ್ದೆ ನಿರ್ವಹಿಸಲು ಇಬ್ಬರನ್ನು ನೇಮಕ ಮಾಡಿರುವುದನ್ನು ಡೆಮಾಕ್ರಾಟ್ ಪಕ್ಷ ಖಂಡಿಸಿದೆ.