Advertisement

ಕಾಶ್ಮೀರಿ ಹಿಂದೂಗಳ ನರಮೇಧ: ಕರಾಳ ಸತ್ಯವನ್ನು ಹೇಳಲಿದೆ ‘The Kashmir Files Unreported’

03:07 PM Jul 19, 2023 | Team Udayavani |

ಮುಂಬಯಿ: ಭಾರತೀಯ ಸಿನಿಮಾರಂಗದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಒಂದಷ್ಟು ವಿವಾದದಿಂದಲೇ ಸದ್ದು ಮಾಡಿ ಕೋಟಿಗಟ್ಟಲೇ ಕಮಾಯಿ ಮಾಡಿತ್ತು.

Advertisement

ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ, ಅನಾಚಾರ, ಅತ್ಯಾಚಾರದ ಭೀಕರ ಘಟನೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಸಿನಿಮಾ ರಾಜಕೀಯವಾಗಿಯೂ ಸದ್ದು ಮಾಡಿದ್ದು, ಕೆಲ ವರ್ಗದ ಜನರಿಂದ ಪ್ರಶಂಸೆಗೆ ಒಳಗಾದರೆ, ಇನ್ನು ಕೆಲವರು ಸಿನಿಮಾವನ್ನು ಟೀಕಿಸಿದ್ದರು. ಸಿನಿಮಾದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಮೇಲೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಸಿನಿಮಾಕ್ಕೆ ಬೆಂಬಲವಾಗಿ ಕೆಲ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು.

ಇದೀಗ “ಕಾಶ್ಮೀರ್ ಫೈಲ್ಸ್”‌ ಸಿನಿಮಾದ ಚಿತ್ರೀಕರಣ ರೀಸರ್ಚ್‌ ವೇಳೆ ಸಿನಿಮಾ ತಂಡಕ್ಕೆ ಸಿಕ್ಕ ಕೆಲವೊಂದು ಸತ್ಯಾ ಘಟನೆ ಆಧಾರಿತ ಅಂಶಗಳನ್ನು ಹಾಗೂ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಗಳ ಅನುಭವಗಳನ್ನು ಹೇಳಿರುವ ಸಾಕ್ಷ್ಯಚಿತ್ರವನ್ನು ರಿಲೀಸ್‌ ಮಾಡಲು ವಿವೇಕ್‌ ಅಗ್ನಿಹೋತ್ರಿ ರೆಡಿಯಾಗಿದ್ದಾರೆ.

ಇದನ್ನೂ ಓದಿ: ‌ಅನುಮತಿಯಿಲ್ಲದೆ ದೃಶ್ಯ ಬಳಕೆ: “ಹಾಸ್ಟೆಲ್‌ ಹುಡುಗರಿ”ಗೆ ಲೀಗಲ್‌ ನೋಟಿಸ್ ಕೊಟ್ಟ ರಮ್ಯಾ

‘The Kashmir Files Unreported’ ಎಂದು ಸಾಕ್ಷ್ಯ ಚಿತ್ರಕ್ಕೆ ಹೆಸರಿಡಲಾಗಿದೆ. ಇದು ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾದ ವೇಳೆ ಚಿತ್ರತಂಡ ಸಂಗ್ರಹಿಸಿದ ಕೆಲ ಅಂಶಗಳನ್ನು ಒಳಗೊಂಡಿದೆ. ಈ ಸಂಬಂಧ ನಿರ್ದೇಶಕ ವಿವೇಕ್‌ ಅವರು ಟ್ರೇಲರ್‌ ವೊಂದನ್ನು ರಿಲೀಸ್‌ ಮಾಡಿದ್ದಾರೆ.

Advertisement

“ಹಲವಾರು ನರಮೇಧವನ್ನು ಒಪ್ಪದವರು, ಭಯೋತ್ಪಾದನೆಗೆ ಬೆಂಬಲಿಸಿದವರು ಮತ್ತು ಭಾರತದ ಶತ್ರುಗಳು ʼಕಾಶ್ಮೀರ್‌ ಫೈಲ್ಸ್‌ʼ ನ್ನು ಪ್ರಶ್ನಿಸಿದರು. ಕಾಶ್ಮೀರ ಹಿಂದೂಗಳ ಹತ್ಯಾಕಾಂಡದ ಕರಾಳ ಸತ್ಯವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ ಇದನ್ನು‌ ಪಿಶಾಚಿಗಳು ಮಾತ್ರ ಪ್ರಶ್ನೆ ಮಾಡಬಹುದು” ಎಂದು ಟ್ವೀಟ್‌ ಮಾಡಿದ್ದಾರೆ.

‘The Kashmir Files Unreported’ ಡಾಕ್ಯುಮೆಂಟರಿ ಜೀ5 ನಲ್ಲಿ ಪ್ರಿಮಿಯರ್‌ ಆಗಲಿದೆ. ರಿಲೀಸ್‌ ಡೇಟ್‌ ಇನ್ನು ಅನೌನ್ಸ್‌ ಆಗಿಲ್ಲ.

ಸದ್ಯ ವಿವೇಕ್‌ ಅಗ್ನಿಹೋತ್ರಿ ʼದಿ ವ್ಯಾಕ್ಸಿನ್‌ ವಾರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next