Advertisement

ವಿಟ್ಲದಲ್ಲಿ ಅಕ್ರಮ ದನ ಸಾಗಾಟ ಪತ್ತೆ: ಇಬ್ಬರ ಸೆರೆ

02:40 PM Aug 05, 2018 | Team Udayavani |

ವಿಟ್ಲ: ಅಕ್ರಮವಾಗಿ ಕೇರಳಕ್ಕೆ ದನ ಸಾಗಾಟ ಮಾಡುತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ಭಾನುವಾರ ಮದ್ಯಾಹ್ನ ವಿಟ್ಲ ಸಮೀಪದ ಪುಣಚ ಗ್ರಾಮದ ಚಂದಳಿಕೆ- ಮಾಡತ್ತಡ್ಕ ರಸ್ತೆಯ ಕಂಬಳಮೂಲೆಯಲ್ಲಿ ನಡೆದಿದೆ. 

Advertisement

ಬಂಧಿತರನ್ನು ಉಪ್ಪಳ ನಿವಾಸಿ ಅಬೂಬಕ್ಕರ್ ಮತ್ತು ರಾಜ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ದನಗಳನ್ನು ಕೇರಳ ರಿಜಿಸ್ಟೃಶನ್ ಹೊಂದಿದ ಕೆಂಪು ಬಣ್ಣದ ಏಸ್ ಟೆಂಪೋವಿನಲ್ಲಿ ಸಾಗಿಸುತ್ತಿದ್ದರು. ಸಂದರ್ಭ ವಿಟ್ಲ ಎಸ್‌ಐ ನಾಗರಾಜ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ದನ ಅಕ್ರಮ ಸಾಗಟ ಜಾಲವನ್ನು ಬಂಧಿಸಿದ್ದಾರೆ.

ಎರಡು ದನಗಳನ್ನು ರಕ್ಷಿಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next