Advertisement
“ನಮ್ಮ ಹೋರಾಟವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ರಾಜಕೀಯ ಇಚ್ಛಾಶಕ್ತಿಯೇ ಇಲ್ಲ’ ಎಂಬುದು ಅವರ ಬೇಸರದ ನುಡಿ.
ಬಂಟ್ವಾಳ ತಾಲೂಕಿನ ಮೂರು ಹೋಬಳಿಗಳು ಬಂಟ್ವಾಳ, ಪಾಣೆಮಂಗಳೂರು ಮತ್ತು ವಿಟ್ಲ. ಇವುಗಳಲ್ಲಿ ಗ್ರಾಮಗಳ ಲೆಕ್ಕಾಚಾರದಲ್ಲಿ ಬಂಟ್ವಾಳ ದೊಡ್ಡದು. ವಿಸ್ತೀರ್ಣ ಲೆಕ್ಕಾಚಾರದಲ್ಲಿ ವಿಟ್ಲ ಹೋಬಳಿ ದೊಡ್ಡದು. ಬಂಟ್ವಾಳದಲ್ಲಿ 31 ಗ್ರಾಮಗಳು, ಪಾಣೆಮಂಗಳೂರು ಹೋಬಳಿಯಲ್ಲಿ 30 ಗ್ರಾಮಗಳು ಮತ್ತು ವಿಟ್ಲ ಹೋಬಳಿಯಲ್ಲಿ 23 ಗ್ರಾಮಗಳಿವೆ.ವಿಸ್ತೀರ್ಣದ ಲೆಕ್ಕಾಚಾರದಲ್ಲಿ ವಿಟ್ಲವು 64,158.59 ಚದರಡಿ ಇದ್ದು ವಿಟ್ಲವೇ ಉಳಿದವುಗಳಿಗಿಂತ ದೊಡ್ಡದಾಗಿದೆ. ವಿಟ್ಲ ಹೋಬಳಿಯ ಕರೋಪಾಡಿ, ಮಾಣಿಲ ಮೊದಲಾದ ದೂರದ ಹಾಗೂ ಗಡಿಭಾಗದ ನಾಗರಿಕರು ಕಂದಾಯ ಇಲಾಖೆ ಕೆಲಸಗಳಿಗೆ 45 ಕಿ.ಮೀ. ದೂರದ ಬಂಟ್ವಾಳದ ತಾಲೂಕು ಕೇಂದ್ರಕ್ಕೆ ಮತ್ತು ಶಾಸಕರನ್ನು ಸಂಪರ್ಕಿಸಲು ಪುತ್ತೂರಿಗೂ ಅಲೆದಾಡುವ ಸ್ಥಿತಿ. ಬಹುಕಾಲದ ಬೇಡಿಕೆ
ಸರಕಾರ 1973ರಲ್ಲಿ ತಾಲೂಕು ಪುನಾರಚನೆ ಬಗ್ಗೆ ಅಧ್ಯಯನ ನಡೆಸಲು ವಾಸುದೇವ ರಾವ್ ಸಮಿತಿಯನ್ನು ನೇಮಿಸಿತ್ತು.ಆಗ ವಿಟ್ಲದ ಬಾಬು ಶೆಟ್ಟಿ, ದೇವಸ್ಯ ನಾರಾಯಣ ಭಟ್, ಮಾಜಿ ಸಚಿವ ವಿಟuಲದಾಸ ಶೆಟ್ಟಿ ಮನವಿ ನೀಡಿ ತಾಲೂಕು ರಚನೆಗೆ ಒತ್ತಾಯಿಸಿದ್ದರು. ಬಳಿಕ 1985ರಲ್ಲಿ ಹುಂಡೇಕರ್ ಸಮಿತಿಯ ಮುಂದೆ ಕೂಡೂರು ಕೃಷ್ಣ ಭಟ್ಟರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 2009ರಲ್ಲಿ ಮತ್ತೆ ಎಂ.ಪಿ.ಪ್ರಕಾಶ್ ಅವರಿಗೆ ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಲಿಗೆ, ಮುರುವ ನಡುಮನೆ ಮಹಾಬಲ ಭಟ್ ನೇತೃತ್ವದಲ್ಲಿ ಹಾಗೂ 2013ರಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
Related Articles
Advertisement
ಹೋಬಳಿಯಲ್ಲಿ ಏನೇನಿದೆಸಬ್ ರಿಜಿಸ್ಟ್ರಾರ್ ಕಚೇರಿ, ನಾಡ ಕಚೇರಿ, ಪೊಲೀಸ್ ಠಾಣೆ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ, ಮೆಸ್ಕಾಂ ಉಪವಿಭಾಗ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಕೇಂದ್ರ, ಎಲ್ಲ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು, ಗ್ರಾಮೀಣ ಸಹಕಾರಿ ಬ್ಯಾಂಕ್, 45ಕ್ಕೂ ಅಧಿಕ ಸಹಕಾರಿ ಸಂಘಗಳು, ಕ್ಯಾಂಪ್ಕೋ ಶಾಖೆ, ಮಹಿಳಾ ಸೌಹಾರ್ದ ಸಹಕಾರಿ ಸಂಘ, ಅಳಿಕೆ ಸತ್ಯಸಾಯಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಮತ್ತು ಖಾಸಗಿ ಐಟಿಐ, ಪ್ರವಾಸಿ ಮಂದಿರ, ಪಿಯು ಕಾಲೇಜು, ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆ, ಮೈತ್ರೇಯಿ ಗುರುಕುಲ, ಹಲವು ಪ್ರೌಢ-ಪ್ರಾಥಮಿಕ ಶಾಲೆಗಳು ಇನ್ನಿತರ ಹಲವು ಸಂಘ-ಸಂಸ್ಥೆಗಳು ವಿಟ್ಲ ಹೋಬಳಿಯ ಪ್ರಮುಖ ಕೇಂದ್ರ ವಿಟ್ಲದಲ್ಲಿ ಇವೆ. ವಿಶ್ವವಿಖ್ಯಾತಿಯ ದೇಗುಲ
ಗಜಾಕೃತಿಯನ್ನು ಹೊಂದಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ, ಮಾಣಿಲ ಶ್ರೀಧಾಮ ಮಹಾಲಕ್ಷಿ$¾à ಕ್ಷೇತ್ರ, ಬಾಳೆಕೋಡಿ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರ, ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ, ವಿಟ್ಲ ಮೇಗಿನಪೇಟೆಯ ಕೇಂದ್ರ ಜುಮ್ಮಾ ಮಸೀದಿ, ಕನ್ಯಾನ ರಹ್ಮಾನಿಯ ಜುಮ್ಮಾ ಮಸೀದಿ, ವಿಟ್ಲ ಶೋಕಮಾತಾ ಇಗರ್ಜಿ, ಚಂದ್ರನಾಥ ಸ್ವಾಮಿ ಬಸದಿ, ಅಲ್ಲದೇ ಹಿಂದೂ ಕ್ರೈಸ್ತ ಮುಸಲ್ಮಾನರ ಅದೆಷ್ಟೋ ಧಾರ್ಮಿಕ ಕೇಂದ್ರಗಳಿವೆ. 23 ಗ್ರಾಮಗಳು
ವಿಟ್ಲ ಹೋಬಳಿಯಲ್ಲಿ ಒಟ್ಟು 23 ಗ್ರಾಮಗಳಿವೆ. ಬಿಳಿಯೂರು, ಪೆರ್ನೆ, ಕೆದಿಲ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಟ್ನೂರು, ಇಡಿRದು, ಕುಳ, ವೀರಕಂಭ, ಬೋಳಂತೂರು, ವಿಟ್ಲಮುಟ್ನೂರು, ಕೇಪು, ಪುಣಚ, ಪೆರುವಾಯಿ, ಮಾಣಿಲ, ಅಳಿಕೆ, ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು, ವಿಟ್ಲಪಟ್ನೂರು, ವಿಟ್ಲಕಸಬಾ ಗ್ರಾಮಗಳು ಒಳಪಟ್ಟಿವೆ. ಈ ಗ್ರಾಮಗಳಲ್ಲಿ ಕೆಲವು ಬಂಟ್ವಾಳ ವಿಧಾನಸಭಾಕ್ಷೇತ್ರಕ್ಕೆ ಒಳಪಟ್ಟಿವೆ. ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಂತಾರಾಜ್ಯ ಹೆದ್ದಾರಿ ಸಾಗುತ್ತದೆ. – ಉದಯಶಂಕರ್ ನೀರ್ಪಾಜೆ