Advertisement
ಪ್ರಗತಿಪರ ಕೃಷಿಕ ಒಕ್ಕೆತ್ತೂರು ಸೀತಾರಾಮ ಶೆಟ್ಟಿ ವಿಟ್ಲ ಪೇಟೆಯ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿ ಇದೆ. ಆದರೆ ಅದಿನ್ನೂ ಆಗಲಿಲ್ಲ ಎಂದರು. ಆ ಬಗ್ಗೆ ಮೆಸ್ಕಾಂ ಎಸ್ಟಿಮೇಟನ್ನುಲೋ. ಇಲಾಖೆಗೆ ಕಳುಹಿಸಿದೆ. ಇಲಾಖೆ ಅನುದಾನ ಬಿಡುಗಡೆ ಮಾಡಿದ ಕೂಡಲೇ ಸ್ಥಳಾಂತರಿಸುತ್ತೇವೆ ಎಂಬ ಉತ್ತರ ಬಂದಿದೆ ಎಂದು ಅಧ್ಯಕ್ಷರು ತಿಳಿಸಿದರು.
ವಾಹನ ಪಾರ್ಕಿಂಗ್‌ಗೆ ಸೂಕ್ತ ಜಾಗ ಗುರುತಿಸುವಿಕೆ, ಹಳೆ ಬಸ್ ನಿಲ್ದಾಣ ಡಾಮರು ಮೊದಲಾದ ಬೇಡಿಕೆಗಳನ್ನು
ಮಂಡಿಸಲಾಯಿತು.
Related Articles
Advertisement
ಸ್ಥಾಯೀ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ ಮಾತನಾಡಿ, ಪ.ಪಂ.ನಲ್ಲಿ ತೆರಿಗೆದಾರರಿಗೆ ಯಾವುದೇ ತಾರತಮ್ಯ ಮಾಡಿಲ್ಲ. ವಾಣಿಜ್ಯ ಮಳಿಗೆಗಳ ವಿಸ್ತೀರ್ಣ ಕಡಿಮೆ ಇರುವುದರಿಂದ ಅವರ ಮೊತ್ತ ಕಡಿಮೆಯಾಗಿದೆ. ಮನೆಗಳ ವಿಸ್ತೀರ್ಣ ಜಾಸ್ತಿಯಾಗಿದ್ದಲ್ಲಿ ಅವರಿಗೆ ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಕಸ ವಿಲೇವಾರಿಯಲ್ಲಿ ಪ್ರತಿ ಮನೆಯಿಂದ ವಸೂಲಿ ಮಾಡುತ್ತಿದ್ದ ವಾರ್ಷಿಕ 600 ರೂ.ಗಳನ್ನು ಕಡಿತಗೊಳಿಸಿ, ಹಂಚಿನ ಮನೆಗೆ ವಾರ್ಷಿಕ 120 ಮತ್ತು ತಾರಸಿ ಮನೆಗಳಿಗೆ 180 ರೂ. ಗಳನ್ನು ನಿಗದಿಪಡಿಸಲಾಗಿದೆ. ಇದೆಲ್ಲವೂ ಪ.ಪಂ. ವ್ಯಾಪ್ತಿಯ ನಾಗರಿಕರಿಗೆ ಅನುಕೂಲಕರವಾಗಿಯೇ ಇದೆ. ಆದುದರಿಂದ ಯಾವುದೇ ರೀತಿಯಲ್ಲಿ ತೆರಿಗೆ ದರವು ಅವೈಜ್ಞಾನಿಕವಲ್ಲ. ಮೂರು ವರ್ಷದಲ್ಲಿ ಈ ತೆರಿಗೆ ದರವನ್ನು ಪರಿಷ್ಕರಿಸಲಾಗುತ್ತದೆ ಎಂದರು. ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಪ.ಪಂ.ಸದಸ್ಯರು, ಮುಖ್ಯಾಧಿಕಾರಿ ಮಾಲಿನಿ, ಸಿಬಂದಿ ರತ್ನಾ ಮೊದಲಾದವರು ಉಪಸ್ಥಿತರಿದ್ದರು. ಪೂವಪ್ಪ ಬೊಳಂತಿ ಮೊಗರು ಸ್ವಾಗತಿಸಿದರು.
ಬೀಳುವ ಹಂತದಲ್ಲಿ ಅಂಗನವಾಡಿ ಕೇಂದ್ರಅಂಗನವಾಡಿ ಮೇಲ್ವಿಚಾರಕಿ ರೋಹಿಣಿ ಮಾತನಾಡಿ, ವಿಟ್ಲ ಪ.ಪಂ.ನಲ್ಲಿ 23 ಅಂಗನವಾಡಿಗಳಿವೆ. ಅದರಲ್ಲಿ ನಾಲ್ಕು
ಅಂಗನವಾಡಿಗಳು ಬೀಳುವ ಹಂತದಲ್ಲಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿದ್ದಾಗ ತಾ.ಪಂ., ಜಿ.ಪಂ.ಗಳ ಅನುದಾನ ನೀಡ
ಲಾಗುತ್ತಿತ್ತು. ದುರಸ್ತಿಗೂ ಅನುದಾನ ಬರುತ್ತಿತ್ತು. ಪ.ಪಂ. ವ್ಯಾಪ್ತಿಯಲ್ಲಿರುವ ಅಂಗನವಾಡಿಗಳಿಗೆ ಬೇರೆ ಅನುದಾನ
ಗಳೂ ಬರುವುದಿಲ್ಲ, ಪ.ಪಂ. ಕೂಡ ಅನುದಾನ ನೀಡುವುದಿಲ್ಲ. ಇದಕ್ಕೇನು ಮಾಡಬಹುದು ಎಂದು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷರು ಉತ್ತರಿಸಿ ಪ.ಪಂ.ನಲ್ಲಿ ಅಂಗನವಾಡಿಗಳಿಗೆ ಅನುದಾನ ನೀಡಲಾಗುವುದಿಲ್ಲ. ಆದರೆ ಈ ಬಗ್ಗೆ ತಜ್ಞರಲ್ಲಿ ಚರ್ಚಿಸಿ, ಮುಂದಿನ ತೀರ್ಮಾನ ಪ್ರಕಟಿಸುತ್ತೇವೆ ಎಂದರು.