Advertisement

ಶ್ರೀ ಕೃಷ್ಣ ಮಠ: ಕೋವಿಡ್ ನಡುವೆಯೂ ಯಶಸ್ವಿ ವಿಟ್ಲಪಿಂಡಿ ಉತ್ಸವ 

07:34 PM Aug 31, 2021 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ವಿಟ್ಲಪಿಂಡಿ ಉತ್ಸವದ ವೇಳೆ ಭಕ್ತರಿಗೆ ರಥಬೀದಿ ಪ್ರವೇಶಕ್ಕೆ ಅವಕಾಶವಿಲ್ಲದೆ ಇರುವುದರಿಂದ ಸಾರ್ವಜನಿಕರು ಮಂಗಳವಾರ ಬೆಳಗ್ಗೆಯಿಂದ ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದು, ಶ್ರೀ ಕೃಷ್ಣ ಪ್ರಸಾದ ಸ್ವೀಕರಿಸಿ ಮಧ್ಯಾಹ್ನದೊಳಗೆ ಮನೆ ಸೇರುತ್ತಿರುವ ದೃಶ್ಯಗಳು ಕಂಡುಬಂತು.

Advertisement

ಸಾರ್ವಜನಿಕವಾಗಿ ಈ ಬಾರಿ ವೇಷ ಧರಿಸಲು ಅನುಮತಿ ಇಲ್ಲದೆ ಹೋದರೂ ಈ ಬಾರಿ ರಥಬೀದಿಯ ಸುತ್ತಮುತ್ತ ಬೆರಳಣಿಕೆಯ ಸಂಖ್ಯೆಯಲ್ಲಿ ವೇಷಗಳು ಹಾಗೂ ಚಿಕ್ಕ ಮಕ್ಕಳು ಮುಖಕ್ಕೆ ಬಣ್ಣ ಹಾಕಿಕೊಂಡು ರಥ ಬೀದಿ ತುಂಬಾ ಓಡಾಡುತ್ತಿರುವುದು ಕಂಡು ಬಂತು.

ಆನ್ಲೈನ್ ವೀಕ್ಷಣೆ :

ಉತ್ಸವದಲ್ಲಿ ಭಾಗವಹಿಸಲು ಅವಕಾಶವಿಲ್ಲದೆ ಇರುವುದರಿಂದ ಭಕ್ತರು ಮುಂಜಾನೆಯಿಂದಲೇ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಕಂಡು ಬಂತು. ಕೆಲವರು ಶ್ರೀಕೃಷ್ಣ ಕನಕನ ಕಿಂಡಿಯಲ್ಲಿ ದರ್ಶನ ಪಡೆದು ಸಂತೃಪ್ತಿ ಪಡೆದುಕೊಂಡರು. ಇನ್ನು ಕೆಲವರು ಮನೆಯಲ್ಲಿ ಕುಳಿತುಕೊಂಡು ಟಿವಿ ಮೂಲಕ ಲೈವ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ ವೀಕ್ಷಿಸಿದರು.

ಹೆಚ್ಚಿದ ವಾಹನ ಸಂಚಾರ :

Advertisement

ಬೆಳಗ್ಗೆಯಿಂದಲೇ ನಗರದ ಪ್ರಮುಖ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಕಲ್ಸಂಕ, ಆಭರಣ ಮಳಿಗೆ ಮುಂಭಾಗ, ರಥ ಬೀದಿ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಮಧ್ಯಾಹ್ನ ಮೂರ ಬಳಿಕ ನಗರದಲ್ಲಿ ವಾಹನಗಳ ಓಡಾಟ ಕಡಿಮೆ ಇತ್ತು.

ವಿವಿಧ ಅಂಗಡಿಗಳು:

ಕೊರೊನಾದಿಂದ ರಥ ಬೀದಿಯೊಳಗೆ ಹೆಚ್ಚಿನ ಅಂಗಡಿಗಳು ಕಾಣ ಸಿಕ್ಕಿಲ್ಲ. ಆಟಿಕೆ ಮಾರುವ, ವಿವಿಧ ಗೃಹ ಉಪಯೋಗಿ ಸಾಮಗ್ರಿಗಳನ್ನು ಮಾರುವವರ ಸಂಖ್ಯೆ ತೀರಾ ಕಡಿಮೆ ಇತ್ತು. ರಥ ಬೀದಿಯಲ್ಲಿ ಹೆಣ್ಣು ಮಕ್ಕಳು ಕಿವಿಯೋಲೆ, ಬಟ್ಟೆ ಖರೀದಿಯಲ್ಲಿ ಮಗ್ನರಾಗಿದ್ದು, ಮಹಿಳೆಯರು ಹೂವು- ಹಣ್ಣು ಖರೀದಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next