Advertisement

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

11:08 AM Apr 27, 2024 | Team Udayavani |

ಕರಾವಳಿಯ ಕರ್ನಾಟಕವನ್ನು ಆಳಿದ ಅರಸು ಮನೆತನಗಳ ಪೈಕಿ ಸಾವಂತರಾಜರಾದ ಡೊಂಬ ಅರಸರು ಸುಪ್ರಸಿದ್ದರು. ತಾತ್ಕಾ ಲಿಕವಾಗಿ ಕಟ್ಟಿದ ಅರ ಮನೆಯಲ್ಲಿ ಇಂದಿಗೂ ರಾಜಮನೆತನದವರು ವಾಸಿಸುತ್ತಿದ್ದಾರೆ. ಹಾಗಾದರೇ ಈ ಅರಮನೆ ಎಲ್ಲಿದೆ ಅಂತೀರಾ ಅದುವೇ ಪಶ್ಚಿಮ ಘಟ್ಟದ ತಪಲ್ಲಿನಲ್ಲಿರುವ ಸುಂದರವಾದ ಊರು. 16 ಸೀಮೆಯ ಶಕ್ತಿ, 16 ಸೀಮೆಯ ಅದಿಪತಿ ಪಂಚಲಿಂಗೇಶ್ವರ ನೆಲೆಯಾಗಿರುವ ತಾಣವೇ ವಿಟ್ಲ.

Advertisement

ಇದು ಮಂಗಳೂರಿನಿಂದ ಸುಮಾರು 40 ಕಿ.ಮೀ. ದೂರದಲ್ಲಿದ್ದು ಬಂಟ್ವಾಳ ತಾಲೂಕಿನಲ್ಲಿರುವ ವಿಟ್ಲ ಅರಮನೆಯು ಹಲವಾರು ಸ್ಮಾರಕಗಳಲ್ಲಿ ಒಂದಾಗಿದೆ. ಡೊಂಬ ಅರಸರ ಆಡಳಿತಕ್ಕೆ ಒಳಪಟ್ಟ ಅರಮನೆ ಇದಾಗಿದ್ದು, ಟಿಪ್ಪುಸುಲ್ತಾನನ ದಾಳಿಯ ಅನಂತರ ಮೊದಲು ಇದ್ದ ಅರಮನೆಯು ದ್ವಂಸವಾಯಿತು. ಅನಂತರ ತಾತ್ಕಲಿಕವಾಗಿ ಕಟ್ಟಿರುವ ಅರಮನೆಯು ಸಾಂಪ್ರದಾಯಿಕ ಮನೆಯಂತಿದೆ. ಅರಮನೆಗೆ 150 ವರ್ಷದ ಇತಿಹಾಸವಿದ್ದು, ವಿಶೇಷವಾದ ಕೆತ್ತನೆಯನ್ನು ಹೊಂದಿರುವ ಮರದ ದಾರಂದಗಳು, ಮನೆಯ ಎದುರು ಕಂಬಗಳು, ರವಿವರ್ಮ ನರಸಿಂಹರಾಜರು ಮತ್ತು ಕೆಲವು ರಾಜರ ಭಾವಚಿತ್ರಗಳು, ಹಾಗೆಯೆ ಶಾಸನಗಳ ಭಾವಚಿತ್ರಗಳನ್ನು ನಾವು ಮನೆಯ ಮುಂದೆಯೇ ಇದೆ.

ಅದೇ ರೀತಿಯಲ್ಲಿ ಅರಮನೆಯ ವಿನ್ಯಾಸವು ಬಹಳ ವಿಶೇಷವಾಗಿದ್ದು ತೊಟ್ಟಿ ಮನೆಯ ವಿನ್ಯಾಸದಲ್ಲಿದೆ. ಮನೆಯ ಎದುರು ವಿಶೇಷವಾಗಿರುವ ಮರದ ಕೆತ್ತನೆ ನಮ್ಮನ್ನು ಆರ್ಕಷಿಸುತ್ತದೆ. ಸುಮಾರು 40 ಕೋಣೆಗಳನ್ನು ಅರಮನೆಯು ಹೊಂದಿತ್ತು. ಕುಟುಂಬದ ದ ಆರಾದ್ಯ ದೈವವಾದ ದುರ್ಗದೇವಿಯ ಮಠವನ್ನು ಸ್ಥಾಪಿಸಲಾಗಿದೆ. ಮಠದ ಮುಂಭಾಗದಲ್ಲಿ ರಾಜರು ಮತ್ತು ರಾಣಿಯರನ್ನು ದೇವಾಲಯಗಳಿಗೆ ಕರೆದೊಯ್ಯವ ಪಲ್ಲಕಿ ಇದೆ.

ಇನ್ನು ಅರಮನೆಯಲ್ಲಿ ಗತಕಾಲದ ದೀಪಗಳು, ಶಕ್ತಿಕಲ್ಲು ಇದರಲ್ಲಿ ನಾವು ತುಳು ಲಿಪಿಯಲ್ಲಿ ಬರೆದಿರುವ ಶಾಸನಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಹಾಗೆಯೇ ವಿಟ್ಲ ಅರಸು ಮನೆತನದವರು ಅನುವಂಶಿಕವಾಗಿ ಆಡಳಿತಕ್ಕೊಳಪಟ್ಟ ವಿಟ್ಲ ಸೀಮೆಯ ದೈವ ದೇವಸ್ಥಾನಗಲ್ಲಿ ವಿಟ್ಲ ಪಂಚಲಿಅಗೇಶ್ವರ ದೇವಾಲಯವು ಕೂಡ ಪ್ರಮುಖವಾಗಿದ್ದು ಇಂದಿಗೂ ಕೂಡ ವಿಟ್ಟದ ಅಧಿಪತ್ಯವನ್ನು ವಿಟ್ಲ ಅರಮನೆಯವರೇ ನೋಡಿಕೊಳ್ಳುತ್ತಾರೆ.

Advertisement

ವಿಟ್ಲದ ದೈವ ಮಲರಾಯನ ಬಂಡಾರವೂ ಕೂಡ ಅರಮನೆ ಇಂದಲೇ ಹೊರಡುತ್ತದೆ. ಪ್ರತೀ ವರ್ಷವು ಅರಮನೆಯಲ್ಲಿ ನಡೆಯುವ ತ್ರಿಕಾಲ ಪೂಜೆಯಲ್ಲಿ ಸುಮಾರು 7,000 ಕ್ಕಿಂತಲೂ ಅಧಿಕ ಜನರು ಸೇರುತ್ತಾರೆ.

ನರಸಿಂಹರಾಜರ 5 ತಲೆಮಾರಿನ ವಂಶಸ್ಥಾರು ಇಂದಿಗೂ ಕೂಡ ಈ ಮನೆಯಲ್ಲಿ 75ಕ್ಕಿಂತಲೂ ಅಧಿಕ ಜನರು ಮನೆಯಲ್ಲಿ ವಾಸಮಾಡುತ್ತಾ ಇದ್ದಾರೆ. ಪರಂಪರಾಗತವಾಗಿ ಬಂದ ಆಚರಣೆಗಳನ್ನು ಇಂದಿಗೂ ಆಚರಿಸುತ್ತಾ ಬರುತ್ತಿದ್ದಾರೆ ವಿಟ್ಲ ಅರಮನೆಯವರು.

-ಚೈತನ್ಯ ಕೊಟ್ಟಾರಿ

ಎಸ್‌.ಡಿ.ಎಂ. ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next