Advertisement

ವಿಟ್ಲ: ಚಲಿಸುತ್ತಿದ್ದ ಆಮ್ನಿ ಕಾರು ಬೆಂಕಿಗಾಹುತಿ…ಪಾರಾದ ಕುಟುಂಬ

02:55 PM Oct 23, 2022 | Team Udayavani |

ವಿಟ್ಲ: ಚಲಿಸುತ್ತಿದ್ದ ಆಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಆಹುತಿಯಾದರೂ ಪ್ರಯಾಣಿಕರು ಪಾರಾದ ಘಟನೆ ರವಿವಾರ ಸಂಭವಿಸಿದೆ.

Advertisement

ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಆಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮತ್ತು ಪ್ರಯಾಣಿಕರು ವಾಹನ ನಿಲ್ಲಿಸಿ ಹೊರಗಡೆ ಬಂದಿದ್ದಾರೆ.

ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ವಿನಯ ಅವರ ಸರ್ವೀಸ್ ಸ್ಟೇಷನ್ ನಿಂದ ನೀರು ಹಾರಿಸಲಾಯಿತು. ಆದರೆ ಅಷ್ಟೋತ್ತಿಗಾಗಲೇ ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು.

ಇದನ್ನೂ ಓದಿ : ಈ ಬಾರಿ ಅಯೋಧ್ಯೆಯಲ್ಲಿ ವಿಶೇಷ ಸಂಭ್ರಮ: ದೀಪೋತ್ಸವದಲ್ಲಿ ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next