Advertisement

ವಿಟ್ಲ: ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌, ಮೂವರ ಬಂಧನ; ನಗದು, ಸಾವಿರಾರು ಮೌಲ್ಯದ ಮೊಬೈಲ್ ವಶ

03:37 PM Apr 05, 2022 | Team Udayavani |

ವಿಟ್ಲ: ಕೊಳ್ನಾಡು ಗ್ರಾಮದ ಕುದ್ರಿಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಐಪಿಎಲ್‌  ಕ್ರಿಕೆಟ್‌ ಪಂದ್ಯಾಟಕ್ಕೆ ಬೆಟ್ಟಿಂಗ್‌ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿಯನ್ನು ಆಧರಿಸಿ, ವಿಟ್ಲ ಪೊಲೀಸರು ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕರುಣಾಕರ, ಶರತ್‌ಕುಮಾರ, ಅವಿನಾಶ್ ಬಂಧಿತ ಆರೋಪಿಗಳು.

Advertisement

ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಐಪಿಎಲ್‌  ಕ್ರಿಕೆಟ್‌ ಪಂದ್ಯಾಟಕ್ಕೆ ಬೆಟ್ಟಿಂಗ್‌ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿಯನ್ನು ಆಧರಿಸಿ, ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದಾಗ ಲಕ್ನೋ ಹಾಗೂ ಹೈದರಬಾದ್‌ ತಂಡಗಳ ನಡುವೆ ನಡೆಯುತ್ತಿರುವ ಕ್ರಿಕೆಟ್‌ಪಂದ್ಯಾಟಕ್ಕೆ ತಾವು ಬೆಟ್ಟಿಂಗ್‌ ನಡೆಸುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುತ್ತಾರೆ.

ಸ್ಥಳದಲ್ಲಿ ಕ್ರಿಕೆಟ್‌ಪಂದ್ಯಾಟವನ್ನು ವೀಕ್ಷಿಸುತ್ತಿದ್ದ 10000 ರೂ. ಮೌಲ್ಯದ ಲೆನೊವೊ ಕಂಪೆನಿಯ ಲ್ಯಾಪ್‌ಟ್ಯಾಪ್ ಮತ್ತು ನಗದು ಒಟ್ಟು 14500 ರೂ.ಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. 1500 ರೂ. ಮೌಲ್ಯದ ಲಾವಾ ಕಂಪೆನಿಯ 3 ಕೀಪ್ಯಾಡ್‌ಮೊಬೈಲ್, ಸ್ಯಾಮ್ ಸಂಗ್ ಕಂಪೆನಿಯ 9000 ರೂ. ಮೌಲ್ಯದ ಮೊಬೈಲ್-3, ನೋಕಿಯ ಕಂಪೆನಿಯ 500 ರೂ. ಮೌಲ್ಯದ 1ಕೀಪ್ಯಾಡ್ ಮೊಬೈಲ್, ಜಿಯೋ ಕಂಪೆನಿಯ 500 ರೂ. ಮೌಲ್ಯದ 1 ಕೀಪ್ಯಾಡ್ ಮೋಬೈಲ್,  ಆ್ಯಪಲ್ ಕಂಪೆನಿಯ 5000 ರೂ.  ಮೌಲ್ಯದ ಮೊಬೈಲ್ -1, ಆರು ಸಾವಿರ ರೂ ಮೌಲ್ಯದ ರೆಡ್ಮಿ ಕಂಪೆನಿಯ ಮೊಬೈಲ್ -2, ಒಟ್ಟು  47,೦೦೦ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next