ವಿಟ್ಲ: ಕೊಳವೆ ಬಾವಿ ಕೊರೆಯುವ ಯಂತ್ರದ ಲಾರಿ ಹಾಗೂ ದ್ವಿಚಕ್ರವಾಹನದ ನಡುವೆ ಅಪಫಾತ ಸಂಭವಿಸಿ, ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಾಯಗೊಂಡ ಘಟನೆ ಕಡೂರು – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಕಾಶಿಮಠದಲ್ಲಿ ಸಂಭವಿಸಿದೆ.
ಆಲಂಗಾರು ಬ್ರಾಣಪಾದೆ ನಿವಾಸಿ ರಂಜಿತ್ (19) ಮೃತ ಯುವಕ, ಸವಾರ ನಿತಿನ್ (28) ಗಾಯಗೊಂಡಿದ್ದಾರೆ.
ಕೊಳವೆ ಬಾವಿ ಕೊರೆಯುವ ಯಂತ್ರದ ಲಾರಿಗೆ ದ್ವಿಚಕ್ರ ಸಿಲುಕಿ ಹಾಕಿಕೊಂಡಿದ್ದು, ಕೆಲವು ಮೀಟರ್ ದೂರಕ್ಕೆ ಸಹಸವಾರನನ್ನು ಲಾರಿ ಎಳೆದೊಯ್ದಿದೆ. ಇದರಿಂದ ಸಹಸವಾರನ ತಲೆ ಸಂಪೂರ್ಣ ಛಿದ್ರವಾಗಿದೆ.
ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
Related Articles
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಘಟನೆಯ ಬಗ್ಗೆ ಪ್ರಕಾರಣ ದಾಖಲಿಸಿಕೊಂಡಿದ್ದಾರೆ.