Advertisement

ವಿಟ್ಲ: ಪ್ರೀತಿಸುವ ನಾಟಕವಾಡಿ ಅತ್ಯಾಚಾರ: ಆರೋಪಿ ಬಂಧನ

10:15 PM Nov 03, 2022 | Team Udayavani |

ವಿಟ್ಲ: ವಿಟ್ಲ ಅಡ್ಡದ ಬೀದಿಯಲ್ಲಿ ಯುವತಿಯರಿಗೆ ಹಲ್ಲೆ ನಡೆಸಿದ ಪ್ರಕರಣದ ಮುಂದುವರಿದ ಭಾಗವಾಗಿ ಇಬ್ಬರ ಬಂಧನವಾಗಿದೆ. 17 ವರ್ಷದ ಯುವತಿಯನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿದ ವಿಚಾರದಲ್ಲಿ ಕಬಕ ನಿವಾಸಿ ಸಂಶೀರ್‌ (21), ಕನ್ಯಾನ ಸಜಾದ ಯಾನೆ ಸಜ್ಜು (22) ಬಂಧಿತ ಆರೋಪಿಗಳು.

Advertisement

ಇನ್ನೋರ್ವ ಆರೋಪಿ ಶಾಫಿ ತಲೆಮರೆಸಿಕೊಂಡಿದ್ದಾನೆ. ಇದೇ ಪ್ರಕರಣದ ಆರೋಪಿಯಾಗಿರುವ ಆಸಿಫ್ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಅಡ್ಯನಡ್ಕಕ್ಕೆ ಹೋದ ಯುವತಿ ಅಲ್ಲಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಕನ್ಯಾನ ಮೂಲದ ಸಜಾದನೊಂದಿಗೆ ತೆರಳಿದ್ದಳು. ಆತನು ಆಕೆಯನ್ನು ಅಜ್ಞಾತ ಜಾಗದಲ್ಲಿ ಇರಿಸಿದ್ದ. ಬಳಿಕ ಆಕೆಯೊಂದಿಗೆ ಮಂಗಳೂರಿನಲ್ಲಿ ಓಡಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕಬಕದ ಸಂಶೀರ್‌ ಆಕೆಯನ್ನು ಪ್ರೀತಿಸಿ ಅತ್ಯಾಚಾರ ಎಸಗಿರುವ ಬಗ್ಗೆ ಪೊಲೀಸ್‌ ತನಿಖೆಯಲ್ಲಿ ತಿಳಿದು ಬಂದಿದೆ.

ಅ. 10ರಂದು ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾಲಕಿಯರ ಮೇಲೆ ತಪ್ಪು ಗ್ರಹಿಕೆಯಿಂದ ವಿಟ್ಲದ ಅಡ್ಡದ ಬೀದಿಯಲ್ಲಿ ತಂಡವೊಂದು ಹಿಗ್ಗಾಮುಗ್ಗ ಹಲ್ಲೆ ನಡೆಸಿತ್ತು. ಯುವತಿಯರು ದೂರು ನೀಡದ ಹಿನ್ನೆಲೆಯಲ್ಲಿ ಕರೈ ನಿವಾಸಿ ಮಹಮ್ಮದ್‌ ಆರೀಫ್‌ ವಿರುದ್ಧ ಸಾರ್ವಜನಿಕ ಶಾಂತಿಭಂಗ‌ ಪ್ರಕರಣ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next