Advertisement

ವಿಟ್ಲ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ದಶಮಾನೋತ್ಸವ

06:20 AM Aug 14, 2017 | Team Udayavani |

ವಿಟ್ಲ : ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರದ ಮೂರುಕಜೆ ಮೈತ್ರೇಯಿ ಗುರುಕುಲದ ಸಹಕಾರದೊಂದಿಗೆ ವಿಟ್ಲ ಸುತ್ತಮುತ್ತಲಿನ ಎಲ್ಲ ಬಾಲಗೋಕುಲದ ಮಕ್ಕಳನ್ನೊಳಗೊಂಡು ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನ ಕಾರ್ಯಕ್ರಮವು ವಿಟ್ಲದ ವಿಠಲ ಪ.ಪೂ. ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು. 

Advertisement

ಧಾರ್ಮಿಕ ಮುಂದಾಳು ಕುಂಟಾರು ರವೀಶ್‌ ತಂತ್ರಿ ಅವರು  ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ ಮಂಗಳೂರು ರೈ ಎಸ್ಟೇಟಿನ ಅಶೋಕ್‌ ರೈ ಕೋಡಿಂಬಾಡಿ ಮಾತನಾಡಿ “ಅಧರ್ಮ ಅನ್ಯಾಯ ಆಗುವಲ್ಲಿ ನ್ಯಾಯ ಒದಗಿಸುವುದಕ್ಕಾಗಿ ಸಂಘಟನೆ ಅಗತ್ಯ. ಉತ್ತಮ ಸಂಸ್ಕಾರವನ್ನು ಬೆಳೆಸುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು. 

ಮುಖ್ಯ ಅತಿಥಿಗಳಾಗಿ ವಿಟ್ಲ ಬೆನಕ ಕ್ಲಿನಿಕ್‌ನ ಎಲುಬು ತಜ್ಞ ಡಾ| ಅರವಿಂದ್‌ ಭಾಗವಹಿಸಿದ್ದರು. ಶೋಭಾಯಾತ್ರೆ ಉದ್ಘಾಟಿಸಿದ ಸಂಕಪ್ಪ ಗೌಡ ಕೈಂತಿಲ ಮತ್ತು ಸಮಿತಿ ಗೌರವಾಧ್ಯಕ್ಷ ಆನಂದ ಕಲ್ಲಕಟ್ಟ ವೇದಿಕೆಯಲ್ಲಿದ್ದರು. ಅಧ್ಯಕ್ಷ ಜಗದೀಶ ಪಾಣೆಮಜಲು ಸ್ವಾಗತಿಸಿದರು. ಪರಮೇಶ್ವರ ಆಚಾರ್ಯ ಪ್ರಸ್ತಾವಿಸಿದರು. ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಂದಿಸಿದರು. ವಿನಯ್‌ ಆಲಂಗಾರು ಕಾರ್ಯಕ್ರಮ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಆರ್‌. ಕೆ. ಆರ್ಟ್ಸ್ ಚಿಣ್ಣರ ಮನೆ ವಿಟ್ಲ  ಇವರಿಂದ ರಾಜೇಶ್‌ ನಿರ್ದೇಶನದಲ್ಲಿ ನೃತ್ಯ ಸಂಭ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next