Advertisement

ವಿಟ್ಲ: ಚಲಿಸುತ್ತಿದ್ದ ಡಸ್ಟರ್ ಕಾರು ನಡು ರಸ್ತೆಯಲ್ಲೇ ಸುಟ್ಟು ಭಸ್ಮ  

01:26 PM Mar 13, 2022 | Team Udayavani |

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕೋಡಪದವು ಸರವು ಎಂಬಲ್ಲಿ ಚಲಿಸುತ್ತಿದ್ದ ಡಸ್ಟರ್‍ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಿದ್ದಂತೆ ಸುಟ್ಟು ಭಸ್ಮವಾದ ಘಟನೆ ಭಾನುವಾರ ನಡೆದಿದೆ.

Advertisement

ಕೆಲಿಂಜ ನಿವಾಸಿ ಸಿಟ್ರೀನ್ ಪಾಯಸ್ ಅವರ ಕಾರು ಸಂಪೂರ್ಣವಾಗಿ ಸುಟ್ಟು ಕರಲಾಗಿದೆ.

ಇದನ್ನೂ ಓದಿ:ಕಾಶ್ಮೀರ: ಸಿಆರ್‌ಪಿಎಫ್ ಯೋಧನನ್ನು ಹತ್ಯೆಗೈದಿದ್ದ ಉಗ್ರ ಸಹಿತ ಇಬ್ಬರ ಬಂಧನ

ಇವರು ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಕೇಳಿಸಿದ್ದು, ದಿಢೀರನೆ ಕಾರನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾರೆ. ಈ ಸಂದರ್ಭ ಬೆಂಕಿ ಕಾಣಿಸಿಕೊಂಡಿದೆ. ತತ್ ಕ್ಷಣ ಅವರು ಕಾರಿನಿಂದ ಹೊರಗಡೆ ಬಂದಿದ್ದಾರೆ. ನಿನ್ನೆಯಷ್ಟೇ ಕಾರಿನ ದುರಸ್ತಿ ಕಾರ್ಯ ನಡೆದಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next