ವಿಟ್ಲ : ಚಾಲಕನ ನಿಯಂತ್ರಣ ತಪ್ಪಿ ಆಮ್ನಿ ಕಾರೊಂದು ಪ್ರಪಾತಕ್ಕೆ ಉರುಳಿದ ಘಟನೆ ವಿಟ್ಲ-ಮಂಗಳೂರು ರಸ್ತೆಯ ವೀರಕಂಬದಲ್ಲಿ ಮಂಗಳವಾರ ಸಂಭವಿಸಿದೆ
ವಿಟ್ಲ ಕಡೆಯಿಂದ ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಪರಿಣಾಮ ವೀರಕಂಬ ಗ್ರಾಮ ಪಂಚಾಯತ್ ಕಚೇರಿಯ ಸಮೀಪ ಇರುವ ಪ್ರಪಾತಕ್ಕೆ ಉರುಳಿದ ಕಾರಿನಲ್ಲಿದ್ದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ಗಾಯಗೊಂಡಿದ್ದಾರೆ.ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ
ಪ್ರಪಾತದ ಕೆಳಗಡೆ ಮನೆಯೊಂದು ಇದ್ದು, ಅವರ ಅಂಗಳಕ್ಕೆ ಈ ಕಾರು ಬಿದ್ದು, ಸಂಪೂರ್ಣವಾಗಿ ಜಖಂಗೊಂಡಿದೆ. ಆಮ್ನಿ ಕಾರಿ ನಲ್ಲಿದ್ದವರು ಮಾರಿಪಳ್ಳ ನಿವಾಸಿಗಳಾಗಿದ್ದು, ವಿಟ್ಲದ ಒಕ್ಕೆತ್ತೂರು ಎಂಬಲ್ಲಿರುವ ಸಂಬಂಧಿಕರ ಮನೆಗೆ ಬಂದು ಹಿಂತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಇದೇ ಪ್ರಪಾತಕ್ಕೆ ಜೀಪೊಂದು ಉರುಳಿ ಬಿದ್ದಿತ್ತು. ಇಲ್ಲಿ ತಡೆಗೋಡೆ ನಿರ್ಮಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.