Advertisement

ಆನಂದ್‌ಗೆ ತಾಲ್‌ ಮೆಮೋರಿಯಲ್‌ ರ್ಯಾಪಿಡ್‌ ಚೆಸ್‌ ಪ್ರಶಸ್ತಿ

07:30 AM Mar 06, 2018 | Team Udayavani |

ಮಾಸ್ಕೋ: 11ನೇ ತಾಲ್‌ ಮೆಮೋರಿಯಲ್‌ ರ್ಯಾಪಿಡ್‌ ಚೆಸ್‌ ಪಂದ್ಯಾವಳಿಯಲ್ಲಿ ಭಾರತದ ವಿಶ್ವನಾಥನ್‌ ಆನಂದ್‌ ಚಾಂಪಿಯನ್‌ ಆಗಿದ್ದಾರೆ.

Advertisement

ಕೂಟದ ಅಂತಿಮ ಸುತ್ತಿನಲ್ಲಿ ಆನಂದ್‌ ಇಸ್ರೇಲ್‌ನ ಬೊರಿಸ್‌ ಗಾಲ#ಂಡ್‌ ವಿರುದ್ಧ ಡ್ರಾ ಸಾಧಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ 6 ಅಂಕ ಗಳಿಸಿ ಪ್ರಶಸ್ತಿ ಗೆದ್ದರು. ಒಟ್ಟು 10 ಆಟಗಾರರನ್ನು ಒಳಗೊಂಡ ರೌಂಡ್‌ ರಾಬಿನ್‌ ಮಾದರಿಯ ಕೂಟ ಇದಾಗಿತ್ತು. ಒಟ್ಟು 9 ಪಂದ್ಯ ಆಡಿದ ಆನಂದ್‌ 4ರಲ್ಲಿ ಜಯ, 4ರಲ್ಲಿ ಡ್ರಾ ಸಾಧಿಸಿ ಒಂದು ಪಂದ್ಯ ದಲ್ಲಷ್ಟೇ ಸೋಲನುಭವಿಸಿದರು. ಅಂತಿಮ ಪಂದ್ಯದಲ್ಲಿ ಆನಂದ್‌ ಮತ್ತು ಬೊರಿಸ್‌ ಗಾಲ#ಂಡ್‌ ನಡುವೆ ತೀವ್ರ ಸ್ಪರ್ಧೆ ಇತ್ತು. ಆದರೆ, ಬಹಳ ಜಾಗರೂಕತೆಯಿಂದ ಆಡಿದ 

ಆನಂದ್‌ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next