Advertisement

ಮ್ಯಾಗ್ನಸ್‌ಗೆ ಸೋಲುಣಿಸಿದ ಆನಂದ್‌

06:45 AM Dec 29, 2017 | |

ಹೊಸದಿಲ್ಲಿ: ಐದು ಬಾರಿಯ ವಿಶ್ವ ಚಾಂಪಿಯನ್‌, ಮಾಜಿ ನಂ.1 ಶ್ರೇಯಾಂಕಿತ ಭಾರತದ ವಿಶ್ವನಾಥನ್‌ ಆನಂದ್‌ ವಿಶ್ವ ರ್ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕಿತ ನಾರ್ವೆಯ ಮ್ಯಾಗ್ನಸ್‌ ಕಾರ್ಲಸನ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಹಳ ಸಮಯದ ಅನಂತರ ಆನಂದ್‌ ಫಾರ್ಮ್ಗೆ ಮರಳಿದ್ದಾರೆ.

Advertisement

ಗುರುವಾರ ನಡೆದ 9ನೇ ಸುತ್ತಿನ ಪಂದ್ಯದ ಆರಂಭದಲ್ಲಿ ಇಬ್ಬರ ನಡುವೆ ತೀವ್ರ ಸ್ಪರ್ಧೆ ಇತ್ತು. ತುಂಬಾ ಜಾಗರೂಕತೆಯಿಂದ ಆಡಿದ ಆನಂದ್‌ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತ ಸಾಗಿದರು. ಅಂತಿಮವಾಗಿ 34ನೇ ನಡೆಯಲ್ಲಿ ಆನಂದ್‌ ಗೆಲುವು ಸಾಧಿಸಿದರು. ಮ್ಯಾಗ್ನಸ್‌ ಆಘಾತ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next