Advertisement

ದೇಶಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ; ತಾಪಂ ಇಒ ವಸಂತ್‌ಕುಮಾರ್‌

04:19 PM Sep 16, 2022 | Team Udayavani |

ದೇವನಹಳ್ಳಿ: ಜೀವನಾಡಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಮಹಾ ಕಾರ್ಯಕ್ಕೆ ಪ್ರಮುಖ ಶಕ್ತಿಯಾಗಿ ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ನಿಂತು ಕೆಲಸ ಪೂರೈಸಿದ್ದರು ಎಂದು ತಾಪಂ ಇಒ ಎಚ್‌. ಡಿ. ವಸಂತ್‌ಕುಮಾರ್‌ ತಿಳಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ತಾಪಂ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಎಂಜಿನಿಯರ್ ವತಿಯಿಂದ ಹಮ್ಮಿಕೊಂಡಿದ್ದ ಸರ್‌ ಎಂ. ವಿಶ್ವೇಶರಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸರ್‌ ಎಂವಿ ಜೀವನಪೂರ್ತಿ ಜನರಿಗಾಗಿ ಬದುಕಿದ್ದಾರೆ. ಅಣೆಕಟ್ಟು ಕಟ್ಟಿದ್ದು ಮಾತ್ರವಲ್ಲದೆ, ಅನೇಕ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದ್ದರು. ಅವರ ಕೊಡುಗೆ ಅಪಾರವಾದದ್ದು ಎಂದರು.

ರಾಜ್ಯಕ್ಕೆ ಅದ್ಭುತ ಕೊಡುಗೆ: ಒಂದು ರಾತ್ರಿ ವಿಶ್ವೇಶ್ವರಯ್ಯನವರು ಮೇಣದ ಬತ್ತಿ ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಮೇಣದ ಬತ್ತಿಯಲ್ಲಿ ಓದಿ ದೇಶ ಮತ್ತು ರಾಜ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು. ನಾಡು ಕಂಡ ಶ್ರೇಷ್ಠ ಎಂಜಿನಿಯರ್‌, ಆಡಳಿತಗಾರರಾಗಿದ್ದರು. ನಡೆ-ನುಡಿಯಲ್ಲಿ ಆದರ್ಶ ಪಥ ಅನುಸರಿಸಿದ ಅವರ ಜೀವನ ಸದಾಕಾಲಕ್ಕೂ ಪ್ರೇರಣದಾಯಕ ಎಂದರು.

ರಾಜ್ಯದ ಅಭಿವೃದ್ಧಿ: ದೇಶ, ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲೂ ಕಾರ್ಯ ಕೈಗೊಂಡರು. ಭಾಷೆ, ಸಾಹಿತ್ಯ, ಶಿಲ್ಪಕಲೆ ಮತ್ತಿತರ ಕ್ಷೇತ್ರಗಳಲ್ಲಿ ನಾಡು ಏನಾದರೂ ಸಾಧಿಸಬೇಕಾದರೆ ಮೊದಲು ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕೆಂಬ ಧ್ಯೇಯವನ್ನು ಇರಿಸಿಕೊಂಡಿದ್ದರು ಎಂದು ಹೇಳಿದರು.

ದೇಶ, ರಾಜ್ಯದ ಬಗ್ಗೆ ಕಾಳಜಿ: ತಾಪಂ ಸಹಾಯಕ ನಿರ್ದೇಶಕ ಸುನಿಲ್‌ ಮಾತನಾಡಿ, ಒಬ್ಬ ಎಂಜಿನಿಯರ್‌ ಆಗಿ ಅವರು ಕಟ್ಟಡ, ನಗರ, ನೀರಾವರಿ ಯೋಜನೆ ಗಳನ್ನು ಮಾತ್ರ ರೂಪಿಸಲಿಲ್ಲ. ದೇಶ ಮತ್ತು ಕರ್ನಾಟಕದ ಭವಿಷ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಅನೇಕ ಕಾರ್ಯ ಗಳನ್ನು ಕೈಗೆತ್ತಿಕೊಂಡರು. ಇವರ ಆದರ್ಶ ಜೀವನವೇ ನಮಗೆ ದಾರಿದೀಪ ಎಂದು ಹೇಳಿದರು. ಎಂಜಿನಿಯರ್‌ ಚೈತ್ರಾ, ಅರ್ಜುನ್‌, ಪ್ರಶಾಂತ್‌, ಎಂ. ಹರ್ಷಿತಾ, ರಕ್ಷಿತಾ, ಪ್ರಶಾಂತ್‌, ಪ್ರಮೋದ್‌, ಅನಂತ್‌ ಮತ್ತಿತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next