Advertisement

ದೀಬ್ರೂಗಢ –ಬಾಗ್‌ಡೋಗ್ರಾ: ಎ.3ರಿಂದ ವಿಸ್ತಾರಾ ವಿಮಾನಯಾನ ಸೇವೆ

06:02 AM Mar 01, 2019 | udayavani editorial |

ಹೊಸದಿಲ್ಲಿ : ವಿಸ್ತಾರಾ ಏರ್‌ ಲೈನ್ಸ್‌  ಮುಂದಿನ ತಿಂಗಳು ಎಪ್ರಿಲ್‌ 3ರಿಂದ ಅಸ್ಸಾಂ ನ ದಿಬ್ರೂಗಢದಿಂದ ಪಶ್ಚಿಮ ಬಂಗಾಲದ ಬಾಗ್‌ಡೋಗ್ರಾ ಕ್ಕೆ ದಿನ ನಿತ್ಯ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ ಎಂದು ಇಂದು ಶುಕ್ರವಾರ ಪ್ರಕಟಿಸಿದೆ.

Advertisement

ಎಪ್ರಿಲ್‌ 3ರಿಂದ ಇದೇ ವಿಮಾನ ಬಾಗ್‌ಡೋಗ್ರಾ ಮೂಲಕ ದಿಬ್ರೂಗಢ – ದಿಲ್ಲಿ ಹಾರಾಟವನ್ನು ಕೈಗೊಳ್ಳುತ್ತದೆ ಎಂದೂ ವಿಸ್ತಾರ ಏರ್‌ ಲೈನ್ಸ್‌ ಪ್ರಕಟಿಸಿದೆ. 

ಬಾಗ್‌ಡೋಗ್ರಾ  – ದೀಬ್ರೂಗಢ ಹಾರಾಟ ಮತ್ತು ದೀಬ್ರೂಗಢ – ಬಾಗ್‌ಡೋಗ್ರಾ ಹಾರಾಟಕ್ಕೆ ಒಟ್ಟು 2,399 ರೂ. ಶುಲ್ಕದಲ್ಲಿ ಬುಕ್ಕಿಂಗ್‌ ಆರಂಭವಾಗಿದೆ ಎಂದು ವಿಸ್ತಾರಾ ಪ್ರಕಟನೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next