Advertisement
ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ವಿಸ್ಟಾ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ 2.32% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದ್ದು, ಈ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಫೇಸ್‌ಬುಕ್ ನಂತರದ ಅತಿದೊಡ್ಡ ಹೂಡಿಕೆದಾರನ ಸ್ಥಾನವನ್ನು ವಿಸ್ಟಾ ಪಡೆದುಕೊಂಡಿದೆ. ಈ ಹೂಡಿಕೆಯೊಂದಿಗೆ, ಮೂರು ವಾರಕ್ಕೂ ಕಡಿಮೆ ಅವಧಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ 60,596.37 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.
Related Articles
ಹೊಂದಿರುವ ವಿಸ್ಟಾ, ತಂತ್ರಜ್ಞಾನದ ಪರಿವರ್ತಕ ಶಕ್ತಿಯು ಆರೋಗ್ಯಕರ ಗ್ರಹ, ಚುರುಕಾದ ಆರ್ಥಿಕತೆ, ವೈವಿಧ್ಯಮಯ ಮತ್ತು ಎಲ್ಲರನ್ನೂ ಒಳಗೊಂಡ ಸಮುದಾಯ ಮತ್ತು ಸಮೃದ್ಧಿಯತ್ತ ವಿಶಾಲ ಮಾರ್ಗವಿರುವ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಿದೆ ಎಂದು ನಂಬುತ್ತದೆ. ಪ್ರಸ್ತುತ, ವಿಸ್ಟಾ ಪೋರ್ಟ್‌ಫೋಲಿಯೋ ಸಂಸ್ಥೆಗಳು ಭಾರತದಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ.
Advertisement
ವಿಸ್ಟಾ ಜೊತೆಗಿನ ವಹಿವಾಟಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ವಿಶ್ವದ ಮುಂಚೂಣಿ ಟೆಕ್ ಹೂಡಿಕೆದಾರ ಸಂಸ್ಥೆ ವಿಸ್ಟಾವನ್ನು ಜಾಗತಿಕವಾಗಿ ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ಇತರ ಪಾಲುದಾರರಂತೆ, ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂ ಅನ್ನು ಬೆಳೆಸುವ ಹಾಗೂ ಪರಿವರ್ತಿಸುವುದನ್ನು ಮುಂದುವರೆಸುವ ದೃಷ್ಟಿಯನ್ನು ವಿಸ್ಟಾ ಕೂಡ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಪ್ರತಿಯೊಬ್ಬರಿಗೂ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಬಲ್ಲ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಅವರು ನಂಬುತ್ತಾರೆ. ಗುಜರಾತ್ ಮೂಲದ ಕುಟುಂಬದಿಂದ ಬಂದಿರುವ ರಾಬರ್ಟ್ ಮತ್ತು ಬ್ರಿಯಾನ್ ಅವರಲ್ಲಿ, ಭಾರತವನ್ನು ಮತ್ತು ಡಿಜಿಟಲ್ ಭಾರತೀಯ ಸಮಾಜದ ಪರಿವರ್ತಕ ಸಾಮರ್ಥ್ಯವನ್ನು ನಂಬುವ ಇಬ್ಬರು ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ನಾಯಕರನ್ನು ನಾನು ಕಂಡಿದ್ದೇನೆ. ಜಾಗತಿಕವಾಗಿ ತನ್ನ ಹೂಡಿಕೆಗಳಿಗೆ ವಿಸ್ಟಾ ನೀಡುತ್ತಿರುವ ವೃತ್ತಿಪರ ಪರಿಣತಿ ಮತ್ತು ಬಹು-ಹಂತದ ಬೆಂಬಲದ ಪ್ರಯೋಜನವನ್ನು ಜಿಯೋಗಾಗಿಯೂ ಪಡೆಯಲು ನಾವು ಉತ್ಸುಕರಾಗಿದ್ದೇವೆ.” ಎಂದು ಹೇಳಿದ್ದಾರೆ.
ಹೂಡಿಕೆಯ ಬಗ್ಗೆ ಮಾತನಾಡಿದ ವಿಸ್ಟಾದ ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಓ ರಾಬರ್ಟ್ ಎಫ್. ಸ್ಮಿತ್, “ಭಾರತಕ್ಕಾಗಿ ಜಿಯೋ ನಿರ್ಮಿಸುತ್ತಿರುವ ಡಿಜಿಟಲ್ ಸಮಾಜದ ಸಾಧ್ಯತೆಗಳನ್ನು ನಾವು ನಂಬುತ್ತೇವೆ. ಜಿಯೋದ ವಿಶ್ವ ದರ್ಜೆಯ ನಾಯಕತ್ವದ ತಂಡದೊಂದಿಗೆ ಜಾಗತಿಕ ಪ್ರವರ್ತಕನಾಗಿ ಮುಖೇಶ್ ಅವರ ದೃಷ್ಟಿಕೋನವು, ಜಿಯೋ ಪ್ರಾರಂಭಿಸಿದ ಡೇಟಾ ಕ್ರಾಂತಿಯನ್ನು ಬೆಳೆಸಲು ಮತ್ತು ಮುನ್ನಡೆಸಲು ಒಂದು ವೇದಿಕೆಯನ್ನು ನಿರ್ಮಿಸಿದೆ. ಭಾರತದಾದ್ಯಂತ ಸಂಪರ್ಕದಲ್ಲಿ ತ್ವರಿತ ಬೆಳವಣಿಗೆಯನ್ನು ನೀಡಲು, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಗಳಲ್ಲೊಂದರ ಭವಿಷ್ಯವನ್ನು ಉತ್ತೇಜಿಸುವುದಕ್ಕಾಗಿ ಆಧುನಿಕ ಗ್ರಾಹಕ, ಸಣ್ಣ ವ್ಯಾಪಾರ ಮತ್ತು ಉದ್ಯಮಗಳಿಗೆ ತಂತ್ರಾಂಶವನ್ನು ಒದಗಿಸಲು ಜಿಯೋ ಪ್ಲಾಟ್‌ಫಾರ್ಮ್ಸ್ ಜೊತೆ ಸೇರಲುನಾವು ರೋಮಾಂಚನಗೊಂಡಿದ್ದೇವೆ.” ಎಂದು ಹೇಳಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ. ಕರ್ಕ್‌ಲ್ಯಾಂಡ್ ಆಂಡ್ ಎಲ್ಲಿಸ್ ಎಲ್ಎಲ್‌ಪಿ ಹಾಗೂ ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್ ಆಂಡ್ ಕೋ. ವಿಸ್ಟಾ ಸಂಸ್ಥೆಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.