Advertisement
2 ತಿಂಗಳ ಹಿಂದಷ್ಟೇ ವಿಸ್ಮಯಾಳ ತಂದೆ ಸಂತೋಷ್ ಕುಮಾರ್(52)ರನ್ನು ಕಣ್ಣೂರಿನಲ್ಲಿ ಹತ್ಯೆಗೈಯ್ಯಲಾಗಿತ್ತು. ಎಡಪಕ್ಷದ ಕಾರ್ಯಕರ್ತರೇ ಈ ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ವಿಸ್ಮಯಾ ವಿಡಿಯೋದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. “ನನ್ನ ಅಪ್ಪ ನನ್ನ ಕನಸುಗಳನ್ನು ಈಡೇರಿಸಲು ಬಯಸಿದ್ದರು. ಒಂದು ರಾತ್ರಿ ಆ ಎಲ್ಲ ಕನಸುಗಳೂ ಕೊಚ್ಚಿಹೋದವು. ಅವರು ಮಾಡಿದ ಒಂದೇ ತಪ್ಪೆಂದರೆ, ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಬೆಂಬಲಿಸಿದ್ದು. ನನ್ನ ಭವಿಷ್ಯದಲ್ಲಿ ಈಗ ಎಲ್ಲವೂ ಕಗ್ಗತ್ತಲು. ಅವರು ನನ್ನ ತಂದೆಯನ್ನಷ್ಟೇ ಅಲ್ಲ, ನನ್ನ ಕನಸುಗಳು ಮತ್ತು ಭವಿಷ್ಯವನ್ನು ಕೊಂದರು. ನನ್ನ ಅಪ್ಪನನ್ನೇಕೆ ಕೊಂದರು ಎಂಬುದಕ್ಕೆ ನನಗಿನ್ನೂ ಉತ್ತರ ಸಿಕ್ಕಿಲ್ಲ,’ ಎಂದು ಆಕೆ ಹೇಳಿದ್ದಾಳೆ. Advertisement
ನನ್ನ ತಂದೆಯನ್ನೇಕೆ ಕೊಂದಿರಿ; ವಿಸ್ಮಯಾ ಪ್ರಶ್ನೆ
03:45 AM Mar 11, 2017 | |
Advertisement
Udayavani is now on Telegram. Click here to join our channel and stay updated with the latest news.