Advertisement

ವಿಶ್ವ ಆರೋಗ್ಯ ಸಂಸ್ಥೆ ತಂಡ ಭೇಟಿ

12:30 AM Feb 07, 2019 | |

ಉಡುಪಿ/ಕಾರ್ಕಳ/ಸಿದ್ಧಾಪುರ: ರಾಜ್ಯದಲ್ಲಿ ಮಂಗನ ಕಾಯಿಲೆ ಬಾಧಿತರು ಚಿಕಿತ್ಸೆಗೆ ದಾಖಲಾಗಿರುವ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಬುಧವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ ನಡೆಸಿತು. ಆರೋಗ್ಯ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರು ಕೂಡ ತಂಡದಲ್ಲಿದ್ದರು. ತಂಡವು ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು, ಮಣಿಪಾಲ ವಿ.ವಿ ಕುಲಪತಿ, ಕೆಎಂಸಿ ಅಧೀಕ್ಷಕರು ಹಾಗೂ ಎಂಸಿವಿಆರ್‌ ತಂಡದೊಂದಿಗೆ ಸಮಾಲೋಚನೆ ನಡೆಸಿತು.

Advertisement

ಮತ್ತೆ 4 ಶವ ಪತ್ತೆ
ಉಡುಪಿ ಜಿಲ್ಲೆಯಲ್ಲಿ ಮಂಗಗಳ ಸಾವು ಮುಂದುವರಿದಿದ್ದು, ಬುಧವಾರ ವಿವಿಧೆಡೆ ಮತ್ತೆ 4 ಮಂಗಗಳ ಶವ ಪತ್ತೆಯಾಗಿವೆ. ಕಾರ್ಕಳ ಸಮೀಪದ ಶಿರ್ಲಾಲು, ಬೆಳ್ಮಣ್‌, ಆವರ್ಸೆ ಸಮೀಪದ ಹಿಲಿಯಾಣ, ಕಂಡೂರಿನ ವಲೂ¤ರುಗಳಲ್ಲಿ ತಲಾ ಒಂದೊಂದು ಮಂಗಗಳ ಶವ ಪತ್ತೆಯಾಗಿದೆ. ಎರಡು ಮಂಗಗಳ ಶವಗಳ ಅಂಗಾಂಗ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಜಿಲ್ಲೆಯಾದ್ಯಂತ ಸಮೀಕ್ಷೆ
ಬುಧವಾರ ಹಳ್ಳಿಹೊಳೆಯಲ್ಲಿ ಓರ್ವ ವ್ಯಕ್ತಿಯನ್ನು ಶಂಕಿತ ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ತಪಾಸಣೆಗೊಳಪಡಿಸಲಾಯಿತು. ಆದರೆ ಅವರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿಲ್ಲ. ಇದುವರೆಗೆ ಜಿಲ್ಲೆಯಲ್ಲಿ 26 ಮಂದಿಯನ್ನು ತಪಾಸಣೆ ಗೊಳಪಡಿಸಲಾಗಿದ್ದು ಯಾರೊಬ್ಬರ ಲ್ಲಿಯೂ ಮಂಗನ ಕಾಯಿಲೆ ಪತ್ತೆಯಾ ಗಿಲ್ಲ. ಜಿಲ್ಲೆಯಾದ್ಯಂತ ಸಮೀಕ್ಷೆ, ಜಾಗೃತಿ ಕಾರ್ಯಕ್ರಮ, ಡಿಎಂಪಿ ತೈಲ ವಿತರಣೆಯನ್ನು ನಿರಂತರ ನಡೆಸಲಾಗುತ್ತಿದೆ.

ಕೆಎಂಸಿ: 25 ಮಂದಿ ಚಿಕಿತ್ಸೆ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ ಸುಮಾರು 163 ಮಂದಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದು ಇದರಲ್ಲಿ 25 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next