Advertisement

ಸಮಸ್ಯೆ ಬಗೆಹರಿಸಲು ವಾರ್ಡ್‌ಗಳಿಗೆ ಭೇಟಿ

12:57 PM Jan 17, 2020 | Suhan S |

ಗೌರಿಬಿದನೂರು: ನಗರದ ಜನರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿದೀಪಗಳ ವ್ಯವಸ್ಥೆಗೆ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಶಾಸಕ ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರಸಭೆ ಅಧಿಕಾರಿಗಳೊಂದಿಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಹಾಗೂ ಅಹವಾಲು ಗಳನ್ನು ಆಲಿಸಿ ಮಾತನಾಡಿದರು. ನ್ಯಾಷನಲ್‌ ಕಾಲೇಜು ಸಮೀಪದ ಜೀವನ್‌ ಉಪಾಹಾರ ಮಂದಿರದಲ್ಲಿ ಉಪಾಹಾರ ಸೇವಿಸಿದ ನಂತರ ನಾಗರಿಕ ರೊಂದಿಗೆ ಚರ್ಚೆನಡೆಸಿದರು. ರಾಜ್ಯದಲ್ಲಿನ 140 ನಗರಸಭೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ವಿಳಂಬ ವಾಗುತ್ತಿದೆ. ಈ ಕಾರಣದಿಂದ ಜನರಿಗೆ ಮೂಲ ಸೌಲಭ್ಯ ಒದಗಿಸಲು ವಿಳಂಬ ವಾಗುತ್ತಿದೆ ಎಂದರು.

ನಗರದಲ್ಲಿನ ನಾಗರಿಕರಿಗೆ ಯಾವುದೇ ರೀತಿ ಮೂಲ ಸೌಲಭ್ಯಗಳಿಗೆ ತೊಡಕಾಗಬಾರದು. ಆ ಕಾರಣದಿಂದ ರಸ್ತೆಗಳಿಗೆ ಡಾಂಬರೀಕರಣ, ನೀರಿನ ಸಮಸ್ಯೆ ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾ ಗಿದೆ. ನಗರದಲ್ಲಿ ಒಳ ಚರಂಡಿ ವ್ಯವಸ್ಥೆ ಮಾಡಲು ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ನಗರದಲ್ಲಿನ ಸರ್ಕಾರಿ ಐಟಿಐ ಕಾಲೇಜನ್ನು ವೀಕ್ಷಿಸಿದ ಶಾಸಕರು ಹೊಸ ಮಿನಿ ವಿಧಾನಸೌಧದಲ್ಲಿ ಸರ್ಕಾರಿ ಐಟಿಐ ಹಾಗೂ ಸರ್ಕಾರಿ ಜಿಟಿಟಿಸಿ ಪಾಲಿಟೆಕ್ನಿಕ್‌ಗೆ ಒಂದು ಕೊಠಡಿ ನೀಡಿ ಜನರಿಗೆ ಅಲ್ಲಿನ ಕೋರ್ಸ್‌ಗಳು ಹಾಗೂ ಇತರ ವಿಷಯಗಳನ್ನು ತಿಳಿಸಲು ಅನುವು ಮಾಡಿಕೊಡಲಾಗುವುದು ಎಂದರು. ಹಳೆ ರಸ್ತೆಯಲ್ಲಿರುವ ಪ್ರಗತಿ ಬಾಲಕಿಯರ ವಸತಿ ನಿಲಯ ವೀಕ್ಷಿಸಿ ಸಂತೃಪ್ತಿ ವ್ಯಕ್ತ ಪಡಿಸಿದರು. ನಗರ ವೀಕ್ಷಣೆಯಲ್ಲಿ ಶಾಸಕರೊಂದಿಗೆ ನಗರಸಭೆ ಆಯುಕ್ತ ಚಲಪತಿ, ಕಾಂಗ್ರೆಸ್‌ ಮುಖಂಡರಾದ ಪ್ರಕಾಶ ರೆಡ್ಡಿ, ರಾಘವೇಂದ್ರ ಹನು ಮಾನ್‌, ಅಶ್ವತ್ಥನಾರಾಯಣ, ನಗರಸಭೆ ಸದಸ್ಯರಾದ ಗಿರಿ, ಕಲೀಂವುಲ್ಲಾ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next