ತುಮಕೂರು: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಅಧಿಕಾರಿಗಳು ಸಬೂಬು ಹೇಳದೆ, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕೆಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜನಸಂದರ್ಶನ ಸಭೆ ನಡೆಸಿ: ಪರಸ್ಪರ ಸಹಕಾರದೊಂದಿಗೆ ಅಧಿಕಾರಿ ಗಳು ಕೆಲಸ ನಿರ್ವಹಿಸಬೇಕು. ತಾಲೂಕು ಮಟ್ಟದಲ್ಲಿ ಜನಸಂದರ್ಶನ ಸಭೆ ನಡೆಸಿ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಅವರ ಸಲಹೆ-ಸೂಚನೆ ಪಡೆಯಬೇಕು. ಅಲ್ಲದೇ ಯಾವುದೇ ಕಾಮಗಾರಿ ಅವರ ಗಮನಕ್ಕೆ ತಾರದೆ ಕೈಗೊಳ್ಳಬಾರದು ಎಂದು ಸೂಚಿಸಿದರು.
ನೀರು ಪೂರೈಸಿ: ಜಿಲ್ಲೆಯಲ್ಲಿ ಒಟ್ಟು 500 ಬೋರ್‌ವೆಲ್ಗಳಿದ್ದು, ಅದರಲ್ಲಿ 350 ಸಫಲ, 150 ವಿಫಲವಾಗಿರುವ ಬಗ್ಗೆ ಸಿಇಒ ಮಾಹಿತಿ ನೀಡಿದರು. ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಕೂಡಲೇ ಪೈಪ್‌ಲೈನ್ ಸಂಪರ್ಕ ನೀಡಿ ನೀರು ಪೂರೈಸುವಂತೆ ಹೇಳಿದರು.
ಮಳೆ ಬಾರದ ಕಾರಣ ಬಿತ್ತನೆ ಸಾಧ್ಯವಾಗಿಲ್ಲ. ಒಂದೊಂದು ಬೆಳೆಯೂ ಒಂದೊಂದು ಹವಾಗುಣ ಹೊಂದಿದೆ. ಆದ್ದರಿಂದ ಜುಲೈ ಮಾಹೆಯೊಳಗೆ ರಾಗಿ, ಮೆಕ್ಕೆಜೋಳ ಬಿತ್ತನೆ ಮಾಡ ಲಾಗುವುದು. ರೈತರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸ ಲಾಗುವುದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ತಿಳಿಸಿದರು. ಸಚಿವ ಎಸ್.ಆರ್.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿ ಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ಶಾಸಕ ರಾದ ಡಿ.ಸಿ.ಗೌರಿಶಂಕರ್, ಜೆ.ಸಿ. ಮಾಧು ಸ್ವಾಮಿ, ಬಿ.ಸಿ.ನಾಗೇಶ್, ಡಾ.ರಂಗನಾಥ್ ಮತ್ತಿತರರಿದ್ದರು.