Advertisement

ಸ್ಥಗಿತಗೊಂಡ ತೊಗರಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

03:18 PM Mar 08, 2017 | Team Udayavani |

ಆಳಂದ: ಚೀಲದ ಕೊರತೆಯಿಂದಾಗಿ ತೊಗರಿ ಖರೀದಿ ಕೇಂದ್ರಗಳು ತಾತ್ಕಾಲಿಕವಾಗಿ ಮುಚ್ಚಿದ್ದನ್ನು ವೀಕ್ಷಿಸಲು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌  ಮಂಗಳವಾರ ಹಠಾತ್‌ ಭೇಟಿ ನೀಡಿ ಮಾಹಿತಿ  ಕಲೆಹಾಕಿದರು. ಪಟ್ಟಣದ ಎಪಿಎಂಸಿ ನಿವೇಶನದಲ್ಲಿನ ತೊಗರಿ ಖರೀದಿ ಕೇಂದ್ರ ಸ್ಥಳಕ್ಕೆ ಭೇಟಿ ನೀಡಿದಾಗ ತೊಗರಿ ಚೀಲಗಳು ಇರಲಿಲ್ಲ.

Advertisement

ತೂಕವು ಸೇರಿ ಇನ್ನಿತರ ಸಾಮಗ್ರಿಗಳು ಮತ್ತು ಕಾರ್ಮಿಕರು ಹೀಗೆ ಯಾವುದೂ ಇಲ್ಲದೆ ಬಯಲು ಜಾಗ ಕಂಡುಬಂತು.  ಕೇಂದ್ರದ ಯಾವೊಬ್ಬ ಸಿಬ್ಬಂದಿಯೂ ಹಾಜರಿಲ್ಲದ್ದಕ್ಕೆ ಜಿಲ್ಲಾಧಿಕಾರಿಗಳು ಸಿಡಿಮಿಡಿಗೊಂಡರಲ್ಲದೆ, ಖರೀದಿ ಕೇಂದ್ರಗಳ ಮೇಲೆ ನಿಗಾವಹಿಸಬೇಕು ಎಂದು ತಹಶೀಲ್ದಾರಗೆ ತಾಕೀತು ಮಾಡಿದರು. 

ಈ ಸಂದರ್ಭದಲ್ಲಿ ತೊಗರಿ ಮಾರಾಟಕ್ಕೆ ನೋಂದಾಯಿಸಿದ ರೈತರು ಆಗಮಿಸಿ ಕೇಂದ್ರಗಳ ವಿರುದ್ಧ ಹರಿಹಾಯ್ದು, ಸರಣಿಯಂತೆ ತೊಗರಿ ಖರೀದಿ ಮಾಡುತ್ತಿಲ್ಲ ಎಂದು ದೂರಿದರು. ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಚೀಲಗಳ ಕೊರತೆಯಾಗಿ ಖರೀದಿ ಕೇಂದ್ರಗಳು ತಾತ್ಕಾಲಿಕವಾಗಿ ಸ್ಥಗತಗೊಂಡಿವೆ. ಎರಡು ದಿನದಲ್ಲಿ ಬಂಗಾಳದಿಂದ ಚೀಲಗಳನ್ನು ಆಮದು ಮಾಡಿಕೊಂಡು ತೊಗರಿ ಖರೀದಿ ಪ್ರಾಂಭಿಸಲಾಗುವುದು.

ತೊಗರಿ ಬೆಳೆಗಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಖರೀದಿ ಕಾರ್ಯದ ಕೊನೆ ದಿನ ನಿಗದಿಪಡಿಸಿಲ್ಲ, ಎಲ್ಲ ರೈತರ ತೊಗರಿ ಖರೀದಿಸಲಾಗುವುದು ಎಂದು ಹೇಳಿದರು. ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ  ಮಾತನಾಡಿ, ಖರೀದಿ ಕೇಂದ್ರದವರು ಸ್ಥಳದಲ್ಲಿ ಹಾಜರಿಲ್ಲದಕ್ಕೆ ಎಪಿಎಂಸಿ ಕಚೇರಿಗೆ ರೈತರು ಭೇಟಿ ನೀಡುತ್ತಿದ್ದಾರೆ.

ಇದರಿಂದ ಕಚೇರಿ ಸಿಬ್ಬಂದಿಗೆ ತೊಂದರೆ ಉಂಟಾಗುತ್ತಿದೆ. ತಮ್ಮ ಭೇಟಿಯಿಂದ ಖರೀದಿ ಕೇಂದ್ರ ಸುಗಮವಾಗಿ ನಡೆಯಲಿದೆ ಎನ್ನುವ ವಿಶ್ವಾಸ ಮೂಡಿದೆ. ಎಲ್ಲ ರೈತರ ತೊಗರಿ ಖರೀದಿ ಆಗಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ರೈತ ಮಲ್ಲಪ್ಪ ಹತ್ತರಕಿ ಹಾಜರಿದ್ದರು. 

Advertisement

ರೈತರಿಗೆ ಮಾರ್ಗದರ್ಶನ ನೀಡಲು ಸಲಹೆ: ತೊಗರಿ ಅಧಿಕ ಉತ್ಪಾದನೆ ಕೈಗೊಳ್ಳಲು ಮಾರ್ಗದರ್ಶನ ನೀಡುವಂತೆ ವಿಶ್ವ ವಿದ್ಯಾಲಯ ವಿಜ್ಞಾನಿಗಳಿಗೆ ಹೇಳಲಾಗಿದೆ. ಈ ಭಾಗದಲ್ಲಿ ಎಕರೆಗೆ 3ರಿಂದ 4 ಕ್ವಿಂಟಾಲ್‌ ಮಾತ್ರ ತೊಗರಿ ಉತ್ಪಾದನೆ ಆಗುತ್ತದೆ. ಇದರಿಂದ ಸರ್ಕಾರ ಬೆಂಬಲ ಬೆಲೆ ಕೊಟ್ಟರೂ ಸರಿಹೊಂದುವುದಿಲ್ಲ.

ಅಧಿಕ ಉತ್ಪಾದನೆ ಕೈಗೊಳ್ಳುವುದಕ್ಕಾಗಿ ಅತಿ ಹಿಂದುಳಿದ ಕಿನ್ಯಾದೇಶದಮಾದರಿಯಂತೆ ಎಕರೆಗೆ 5-6 ಕ್ವಿಂಟಲ್‌ ತೊಗರಿ ಉತ್ಪಾದನೆ ಮಾಡಿದಂತೆ ಇಲ್ಲಿನ ರೈತರಿಗೂ ಮಾರ್ಗದಶನ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಯೋಜನೆ ರೂಪಿಸಲು ಸಲಹೆ ನೀಡಿದ್ದೇನೆ. ಅಧಿಕ ಉತ್ಪಾದನೆ ಆದರೆ, ಒಂದೊಮ್ಮೆ ಮಾರುಕಟ್ಟೆಯಲ್ಲಿ ಅಥವಾ ಸರಕಾರದ ಇತಿಮಿತಿಯ ಬೆಲೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಆಳಂಗಾ ಮತ್ತು ತಡೋಳಾ ರೈತರ ತೊಗರಿ ಖರೀದಿಗೆ ಹಿಂದೇಟಾಗಿದೆ ಅದಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ಪರಿಶೀಲಿಸಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು. ನಂತರ ಜಿಲ್ಲಾಧಿಕಾರಿಗಳು ನಿಂಬರಗಾ ತೊಗರಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next