Advertisement
ಹೊಯ್ಸಳೇಶ್ವರ ದೇವಾಲಯ ಸೇರಿದಂತೆ ಹಳೇಬೀಡು ಸುತ್ತಮುತ್ತಲಿನ ರಾಷ್ಟ್ರೀಯ ಸ್ಮಾರಕಗಳ ಸೌಕರ್ಯಗಳ ಕೊರತೆ, ಹಾಗೂ ಕಳಪೆ ನಿರ್ವಹಣೆಯನ್ನು ಗಮನಿಸಿದ ಕೇಂದ್ರ ಪುರಾತತ್ವ ಇಲಾಖೆ ಮಹಾ ನಿರ್ದೇಶಕಿ ಉಷಾ ಶರ್ಮ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
Related Articles
Advertisement
ದೇವಾಲಯದ ಬಳಿ ಬಾರದ ಡಿ.ಜಿ.: ಪ್ರತಿ ನಿತ್ಯ ದೇವಾಲಯದ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಬರುವ ಸ್ಥಳದಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಗಳಿಗೆ ಅವುಗಳ ಬಗ್ಗೆ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ ಉಷಾ ಶರ್ಮ ಅವರಿಗೆ ಗಮನಕ್ಕೆ ತರಲು ಕಾಯುತ್ತಿದ್ದ ಸ್ಥಳೀಯರು ದೇವಾಲಯದ ಮೆಟ್ಟಿಲನ್ನೂ ಹತ್ತದ ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯ ವಸ್ತು ಸಂಗ್ರಹಾಲಯವನ್ನು ಹೊರತುಪಡಿಸಿ ಮತ್ತೆಲ್ಲೂ ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್ ದೀಪಗಳು ಉರಿಯದೇ ಹಲವು ವರ್ಷಗಳೇ ಕಳೆದಿವೆ. ದೇವಾಲಯದ ಒಳಭಾಗ ಕತ್ತಲೆಯ ಕೋಣೆಯಂತಾಗಿದೆ. ಸೂಕ್ತ ನಿರ್ವಹಣೆ ಇಲ್ಲದೇ ದೇವಾಲಯದ ಒಳಭಾಗದ ವಿಗ್ರಹಗಳು ಬಿಳಿ ಬಣ್ಣಕ್ಕೆ ತಿರುಗಿವೆ. ದೇವಾಲಯಕ್ಕೆ ಸಂಬಂಧಿಸಿದಂತೆ ಸೂಕ್ತ ನಾಮಫಲಕಗಳೂ ಇಲ್ಲ ಎಂಬ ಇತ್ಯಾದಿ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಲು ಕಾಯುತ್ತಿದ್ದೆವು ಆದರೆ ಸ್ಮಾರಕಗಳನ್ನೇ ಗಮನಿಸದ ಅಧಿಕಾರಿಗಳಿಗೆ ಮೇಲಧಿಕಾರಿಗಳು ದಾರಿ ತಪ್ಪಿಸಿದ್ದಾರೆ ಎಂದು ಸ್ಥಳೀ ಯರು ತಮ್ಮ ಸಹನೆಯನ್ನು ಹೊರಹಾಕಿದರು
ವ್ಯವಸ್ಥೆ ಸುಧಾರಣೆಗೆ ಕ್ರಮ: ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿರುವ ಎಲ್ಲಾ ಸ್ಮಾರಕಗಳ ರಕ್ಷಣೆ ಹಾಗೂ ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ ಕೆಳ ಹಂತದಿಂದ ಯೋಜನೆ ಗಳನ್ನು ತಯಾರಿಸಿ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಉಷಾ ಶರ್ಮ ಹೇಳಿದರು.
ಹೇಬೀಡು ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲ ನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿ, ಇದಕ್ಕೆ ಸಂಬಂದಿಸಿ ದಂತೆ ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಇಲಾಖೆ ಅಧಿಕಾರಿ ಶಿವಲಿಂಗಪ್ಪ ಕುಂಬಾರ್, ಪುರಾತತ್ವ ಸಂರಕ್ಷಣಾಧಿಕಾರಿ ಅರಾವಜಿ, ಸಹಾಯಕ ಸಂರಕ್ಷಣಾಧಿಕಾರಿ ಎಲ್.ಬಿ. ಕಾಮತ್ ಮುಂತಾದವರು ಹಾಜರಿದ್ದರು.