ಬೆಂಗಳೂರು: ಚಂದನವನದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಲು ಸೋಮವಾರವೂ ಕಂಠೀರವ ಸ್ಟುಡಿಯೋ ಬಳಿ ನೂರಾರು ಮಂದಿ ಅಭಿಮಾ ನಿಗಳು ಬಂದು ನಿರಾಸೆಗೊಂಡು ಹಿಂದಿರುಗಿದರು. ಈ ಮಧ್ಯೆ ತಮಿಳುನಟ ಶಿವಕಾರ್ತಿಕೇ ಯನ್ ಮತ್ತು ಪುನೀತ್ ಸಹೋದರಿಯರು ಭೇಟಿ ನೀಡಿ ಪುನೀತ್ ರಾಜ್‌ಕುಮಾರ್ ಸಮಾ ಧಿಗೆ ಪೂಜೆ ಸಲ್ಲಿಸಿದರು. ಮಂಗಳವಾರ ಕುಟುಂಬ ಸದಸ್ಯರಿಂದ ಹಾಲು-ತಪ್ಪ ಕಾರ್ಯ ಇರುವುದರಿಂದ ಸಮಾ ಧಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ನಂದಿನಿ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ವೆಂಕಟೇಗೌಡ ನೇತೃತ್ವದಲ್ಲಿ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳು ಸೇರಿ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳವಾರದ ಬಳಿಕ ಅಭಿಮಾನಿ ಗಳಿಗೆ ದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಚಿಂತಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿರುವ ನೂರಾರು ಮಂದಿ ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಹೊರಗೆ ಜಮಾ ಯಿಸಿರುವುದರಿಂದ ಎರಡು ದ್ವಾರಗಳ ಬಳಿ ಬ್ಯಾರಿಕೆಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ:- ಹೊನ್ನಡಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪೊಲೀಸರು, ಅವರ ಮನವೊಲಿಸಿ ವಾಪಸ್ ಕಳುಹಿಸಿದರು. ತಮಿಳುನಾಡಿನ ಗಾಜನೂರು, ಸಿಂಗ ನಲ್ಲೂರು, ಗುಂಟಾಪುರ, ತಾಳುವಾಡಿ ಸೇರಿ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ಕುಟುಂಬ ಸಮೇತರಾಗಿ ಬಂದಿದ್ದೇವೆ.
ನೂರಾರು ಕಿ.ಮೀ. ಕ್ರಮಿಸಿ ಬಂದು ಅಪ್ಪು ದರ್ಶನ ಪಡೆಯದೆ ವಾಪಸ್ ಹೋಗುವುದಿಲ್ಲ. ಪುನೀತ್ ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ಮುಗಿಸಿದ ಬಳಿಕ ದರ್ಶನ ಪಡೆದೆ ಹೋಗುತ್ತೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ ಎಂದು ಸ್ಥಳದಲ್ಲಿರುವ ಪೊಲೀಸ್ ಮೂಲಗಳು ತಿಳಿಸಿವೆ. ಮನೆಗೂ ಬಿಗಿ ಭದ್ರತೆ: ಪುನೀತ್ ರಾಜ್ ಕುಮಾರ್ ನಿಧನ ನಂತರ ಸದಾಶಿವನಗರದ ಅವರ ಮನೆಗೂ ಭದ್ರತೆ ನೀಡಲಾಗಿದೆ. ಕೆಲ ಅಭಿಮಾನಿಗಳು ಅವರ ಮನೆ ಬಳಿ ಹೋಗಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆಯಿರುವ ಹಿನ್ನೆ ಲೆಯಲ್ಲಿ ಭದ್ರತೆ ನೀಡಲಾಗಿದೆ.
ಪುನೀತ್ ಮನೆಗೆ ಪ್ರಭು ಗಣೇಶನ್ ಭೇಟಿ
ಸದಾಶಿವನಗರದ ಪುನೀತ್ ಮನೆಗೆ ತಮಿಳು ನಟ ಪ್ರಭು ಗಣೇಶನ್ ಭೇಟಿ ನೀಡಿ, ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಕೆಲ ಹೊತ್ತು ಚರ್ಚಿಸಿ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದು ಬಹಳ ನೋವು ತಂದಿದೆ. ತಂದೆ ಶಿವಾಜಿ ಗಣೇಶನ್, ರಾಜ್‌ಕಮಾರ್ ಆತ್ಮೀಯ ಸ್ನೇಹಿತರಾಗಿದ್ದರು. ನಾನು, ಶಿವಣ್ಣ, ರಾಘಣ್ಣ, ಅಪ್ಪು ಸಹೋದರರ ರೀತಿ ಇದ್ದೆವು. ಇದೀಗ ಆತ ಇಲ್ಲ ಎಂದರೆ ನಂಬಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಶಿವಕಾರ್ತಿಕೇಯನ್ ಭೇಟಿ: ಸಂತಾಪ ಪುನೀತ್ ಸಮಾಧಿಗೆ ತಮಿಳುನಾಡಿನ ನಟ ಶಿವಕಾರ್ತಿಕೇಯನ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪುನೀತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಅವರ ಒಳ್ಳೆಯ ಗುಣಗಳು ತುಂಬ ಇಷ್ಟ ಆಯಿತು. ಅವರಿಂದ ಸಾಕಷ್ಟು ಕಲಿತಿದ್ದೇನೆ. ಒಂದುತಿಂಗಳ ಹಿಂದಷ್ಟೇ ಅವರ ಜತೆ ಫೋನ್‌ನಲ್ಲಿ ಮಾತನಾಡಿದ್ದೆ. ಬೆಂಗಳೂರಿಗೆ ಬಂದಾಗ ತಪ್ಪದೇ ಮನೆಗೆ ಬರಬೇಕೆಂದು ಒತ್ತಾಯಿಸಿದ್ದರು ಎಂದು ಭಾವುಕರಾದರು.