Advertisement

ಕಡಬಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ವಿಶೇಷ ಮೇಲ್ವಿಚಾರಕ ಭೇಟಿ

01:31 AM Aug 12, 2023 | Team Udayavani |

ಕಡಬ: ರಾಷ್ಟ್ರೀಯ ಮಾನವ ಹಕ್ಕುಗಳ ವಿಶೇಷ ಮೇಲ್ವಿಚಾರಕ ಡಾ| ಯೋಗೇಶ್‌ ದುಬೆ ಶುಕ್ರವಾರ ಕಡಬ ಪರಿಸರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕಡಬ ಆಡಳಿತ ಸೌಧದಲ್ಲಿ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

Advertisement

ಆರಂಭದಲ್ಲಿ ಮರ್ದಾಳ ಸರಕಾರಿ ಹಿ.ಪ್ರಾ. ಶಾಲೆಗೆ ಭೇಟಿ ನೀಡಿ ಅಲ್ಲಿರುವ ಅಂಗವಿಕಲರಿಗೆ ಕೊಡುವ ಸವಲತ್ತುಗಳು ಹಾಗೂ ಮೂಲಭೂತ ವ್ಯವಸ್ಥೆಗಳನ್ನು ಅರಿತುಕೊಂಡರು. ಬಳಿಕ ಕಡಬ ತಾಲೂಕು ಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಾಲೂಕಿನಲ್ಲಿ ಎಷ್ಟು ಅಂಗವಿಕಲರು ಇದ್ದಾರೆ. ಅವರಿಗೆ ಕಂದಾಯ ಇಲಾಖೆಯಿಂದ ಎಷ್ಟು ಮಾಸಾಶನ ನೀಡಲಾಗುತ್ತಿದೆ, ತಾಲೂಕಿನಲ್ಲಿರುವ ಎಂಡೋಪೀಡಿತರ ಸಂಖ್ಯೆ ಹಾಗೂ ಅವರ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಶಾಲೆಗಳಲ್ಲಿ, ಪೊಲೀಸ್‌ ಠಾಣೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಅಂಗವಿಲರು ಬಂದಾಗ ಕುಳಿತು ಕೊಳ್ಳಲು ಕುರ್ಚಿಗಳು, ರ್‍ಯಾಂಪ್‌ಗ್ಳು, ಗಾಲಿ ಕುರ್ಚಿ ಮತ್ತು ವಿಶೇಷ ಆಸನದ ವ್ಯವಸ್ಥೆಗಳು ಇವೆಯಾ, ಆರೋಗ್ಯ ಕೇಂದ್ರಗಳಲ್ಲಿ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಚಾರಿಸಿದರು.

ಕಡಬ ಉಪತಹ  ಶೀಲ್ದಾರ್‌ ಗೋಪಾಲ್‌ ಕಲುಗುಡ್ಡೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ, ವಿಕಲಚೇತನರ ತಾಲೂಕು ವಿವಿಧೋದ್ದೇಶ ಕಾರ್ಯಕರ್ತೆ ಅಕ್ಷತಾ, ಪುತ್ತೂರು ಬಿಇಒ ಸಿ. ಲೋಕೇಶ್‌, ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ವ್ಯವಸ್ಥಾಪಕ ಭವನೇಂದ್ರ ಕುಮಾರ್‌, ಕಡಬ ಎಸ್‌ಐ ಆಂಜನೇಯ ರೆಡ್ಡಿ, ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಭರತ್‌ ಬಿ.ಎಂ., ಎಂಜಿನಿಯರ್‌ ಸಂಗಪ್ಪ ಹುಕ್ಕೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಭಾರತಿ, ಅಂಗನವಾಡಿ ಮೇಲ್ವಿಚಾರಕಿ ಭವಾನಿ, ಪಶುವೈದ್ಯಾಧಿಕಾರಿ ಡಾ| ಅಜಿತ್‌, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ರೂಪ್ಲಾ ನಾಯಕ್‌, ಉದ್ಯೋಗ ಖಾತ್ರಿ ಯೋಜನೆಯ ಸುಪರ್ಣ ಇಲಾಖಾ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next