Advertisement

ಆನೆಗೊಂದಿ ಕರಕುಶಲ ಕೇಂದ್ರಕ್ಕೆ ಬ್ರಿಟಿಷ್ ರಾಯಭಾರಿಗಳ ಭೇಟಿ

07:34 PM Jan 06, 2023 | Team Udayavani |

ಗಂಗಾವತಿ:ತಾಲೂಕಿನ ಆನೆಗೊಂದಿಯಲ್ಲಿರುವ ದಿ ಕಿಷ್ಕಿಂಧಾ ಟ್ರಸ್ಟ್ ನ ಊರಮ್ಮ ಹೆರಿಟೇಜ್ ಕರಕುಶಲ ಕೇಂದ್ರಕ್ಕೆ ಬ್ರಿಟಿಷ್ ರಾಯಭಾರಿ ಅಲೆಗ್ಸಾಂಡರ್ ಎಲೀಸ್ ದಂಪತಿಗಳು ಭೇಟಿ ನೀಡಿ ಬಾಳೆ ನಾರಿನಿಂದ ತಯಾರಿಸುವ ಗೃಹ ಮತ್ತು ವೈಯಕ್ತಿಕ ಬಳಕೆಯ ವಸ್ತುಗಳನ್ನು ಪರಿಶೀಲಿಸಿ ವಸ್ತುಗಳನ್ನು ತಯಾರಿಸುವ ಮಹಿಳೆಯರಿಂದ ಮಾಹಿತಿ ಪಡೆದರು.

Advertisement

ಸ್ಥಳೀಯವಾಗಿ ಸಿಗುವ ಬಾಳೆ ನಾರು ಮತ್ತು ನದಿ ಪಾತ್ರದ ವಿವಿಧ ಸಸ್ಯಗಳು ಹೂವುಗಳಿಂದ ತಯಾರಿಸಿದ ಅಲಂಕಾರ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಿ ಕಿಷ್ಕಿಂಧಾ ಟ್ರಸ್ಟ್ ಮಾಲಕರಾದ ಶಮಾ ಪವಾರ್, ಪಿಎಸ್‌ಐ ಶಾರದಮ್ಮ, ಶಿವಶರಣಪ್ಪ ಗ್ರಾ.ಪಂ.ಅಧಿಕಾರಗಳಿದ್ದರು. ನಂತರ ಪಂಪಾಸರೋವರ,ಅಂಜನಾದ್ರಿ, ಜಂಗ್ಲಿ, ಸಾಣಾಪೂರ ಕೆರೆ ಏಳುಗುಡ್ಡ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next