ಗುರುಪುರ: ದಕ್ಷಿಣಕನ್ನಡ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ನೀರುಮಾರ್ಗದಿಂದ ಬಜಪೆ- ಅದ್ಯಪಾಡಿ, ಗಂಜಿಮಠದವರೆಗೆ ರೋಡ್ ಶೋ, ಮನೆಮನೆ, ದೇವಸ್ಥಾನ, ದೈವಸ್ಥಾನ, ಚರ್ಚ್, ಮಸೀದಿ ಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.
ಅದ್ಯಪಾಡಿಯಿಂದ ಆಗಮಿಸಿದ ರೈ ಪೆರಾರ ಬಲವಂಡಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಗುರುಪುರ ಕೈಕಂಬದ
ಸೂರಲ್ಪಾಡಿಯಲ್ಲಿ ಸ್ಥಳೀಯರನ್ನುದ್ದೇಶಿಸಿ ಮಾತನಾಡಿದರು. ಬಳಿಕ ಗಂಜಿಮಠ ಮಹಾಗಣಪತಿ ದೇವಸ್ಥಾನ ಮತ್ತು ಸ್ಥಳೀಯ ಗ್ರಾಮಗಳಿಗೆ ಭೇಟಿ ನೀಡಿ, ಕೈಕಂಬ ಗಣೇಶ ಕಟ್ಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಾಜಿ ಶಾಸಕ ಮೊದಿನ್ ಬಾವಾ, ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯರಾದ ಸುನಿಲ್ ಪೂಜಾರಿ, ಸಚಿನ್ ಅಡಪ, ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಜಾಕಿರ್ ಹಾಗೂ ಕಾಂಗ್ರೆಸ್ ಮುಖಂಡರಾದ ಬಾಷಾ ಮಾಸ್ಟರ್, ಸುರೇಂದ್ರ ಕಂಬಳಿ, ಗಣೇಶ್ ಪೂಜಾರಿ, ಇಮಿಯಾಜ್, ಎ.ಕೆ. ಅಶ್ರಫ್ ಅಡೂರು, ಬೂಬ ಕೈಕಂಬ, ಮಜೀದ್ ಪೃಥ್ವೀರಾಜ್, ಕಣಚೂರು ಮೋನು, ಸೆಲಿನಾ ಮೊದಲಾದವರಿದ್ದರು.