Advertisement

ಹಳ್ಳಿ ಮತ್ತು ಪಟ್ಟಣಗಳಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಕೋವಿಡ್ ಪರೀಕ್ಷೆ : ಆರ್ ಅಶೋಕ

06:14 PM May 23, 2021 | Team Udayavani |

ಬೆಂಗಳೂರು : ಗ್ರಾಮೀಣ‌ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸೋಂಕಿನ‌ ಲಕ್ಷಣವಿರುವವರನ್ನ ಪ್ರತಿ ಮನೆ, ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡ ರಚಿಸಲಾಗುವುದು ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್ ಅಶೋಕ ತಿಳಿಸಿದ್ದಾರೆ.

Advertisement

ಈ ಕುರಿತಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಅನುಸರಿಸುತ್ತಿದ್ದಾಗಲೂ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಹರಡುವುದು ‌ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗೆಯೇ ಜನರು ಕೂಡಾ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗೆಯೇ ಪರೀಕ್ಷಾ ಕೇಂದ್ರಗಳ ಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಹೀಗಾಗಿ ವೈದ್ಯರು, ಎಎನ್ಎಮ್ ಗಳು, ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಪರೀಕ್ಷೆ ಕೈಗೊಳ್ಳಲಿದ್ದಾರೆ.

ಈ ತಂಡವು ಸೋಂಕಿತರನ್ನ ಗುರುತಿಸಿ ಸ್ಥಳದಲ್ಲೆ ರ್ಯಾಪಿಡ್ ಆಂಟಿಜೆನ್‌ ಟೆಸ್ಟ್ ಕೈಗೊಳ್ಳಲಿದ್ದಾರೆ.ಹೀಗಾಗಿ ಸೋಂಕಿತರನ್ನ ಗುರುತಿಸುವುದಕ್ಕೆ ಅನುಕೂಲವಾಗಲಿದೆ. ವೈದ್ಯರು ಆ ವೇಳೆಯೇ ಸೋಂಕಿತರಿಗೆ ಮನೆ‌ಯಲ್ಲೇ ಕಾಳಜಿ ತೆಗೆದುಕೊಂಡರೇ‌ ಸಾಕೇ ಅಥವಾ ಆಸ್ಪತ್ರೆಗೆ ದಾಖಲಾಗಬೇಕಾ ಎಂಬುದನ್ನ ನಿರ್ಧರಿಸುತ್ತಾರೆ. ಹಾಗೇ ಪ್ರಾಥಮಿಕ‌ ಸೋಂಕಿತರನ್ನೂ ಗುರುತಿಸಿ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ವೈದ್ಯಕೀಯ ಕಿಟ್ ಕೂಡಾ ನೀಡಲಾಗುತ್ತದೆ”, ಎಂದು ಹೇಳಿದರು.

“ಈಗಾಗಲೇ ಮೊಬೈಲ್ ಕ್ಲಿನಿಕ್‌ ಗ್ರಾಮಗಳಿಗೆ ಭೇಟಿ ನೀಡಿದ್ದು, ಅಂತಿಮ ವರ್ಷದಲ್ಲಿರುವ ವೈದ್ಯಕೀಯ, ಬಿಎಸ್ಸಿ ನರ್ಸಿಂಗ್, ಬಿಡಿಎಸ್ ವಿದ್ಯಾರ್ಥಿಗಳನ್ನ ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next