Advertisement
ಎರಡನೇ ದಿನವೂ ಉದ್ಯಮಶೀಲತೆ ಸಮ್ಮೇಳನದಲ್ಲಿ ಭಾಗವಹಿಸಿದ ಇವಾಂಕಾ, ಮಹಿಳಾ ಉದ್ಯಮಶೀಲತೆಯ ಮಹತ್ವದ ಬಗ್ಗೆ ಮಾತನಾಡಿದರು. ಮಹಿಳೆಯರ ಉದ್ಯಮಶೀಲತೆಗೆ ತಂತ್ರಜ್ಞಾನ ಅತ್ಯಂತ ಮಹತ್ವದ್ದಾಗಿದೆ. ತಂತ್ರಜ್ಞಾನವು ಹೊಸ ವಹಿವಾಟುಗಳನ್ನು ನಡೆಸಲು ಸಾಕಷ್ಟು ಅವ ಕಾಶಗಳನ್ನು ಒದಗಿಸಿದೆ ಎಂದು ಹೇಳಿದರು.ತಂದೆಯ ಮೆಚ್ಚುಗೆ: ಸಮ್ಮೇಳನದಲ್ಲಿ ಭಾಗ ವಹಿಸಿ ಯಶಸ್ಸುಗೊಳಿಸಿದ್ದಕ್ಕೆ ಡೊನಾಲ್ಡ್ ಟ್ರಂಪ್ ಪುತ್ರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಟ್ರಂಪ್ ಮಹಿಳಾ, ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತಿರು ವುದು ಉತ್ತಮ ಪ್ರಯತ್ನ ಎಂದಿದ್ದಾರೆ.
ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್ ಹಾಗೂ ಟ್ರಂಪ್ ಮಧ್ಯೆ ನಡೆಯುತ್ತಿರುವ ತಿಕ್ಕಾಟ ಇದೀಗ ಇನ್ನೊಂದು ಹಂತ ತಲುಪಿದ್ದು, ಇವಾಂಕಾ ಜತೆಗೆ ವಿದೇಶಾಂಗ ಸಚಿವಾಲಯದ ಪ್ರಮುಖ ಅಧಿಕಾರಿಗಳು ಭೇಟಿ ನೀಡದೇ ಇರುವುದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ಇವಾಂಕಾ ಜತೆಗೆ ಭಾರತಕ್ಕೂ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ. ಟ್ರಂಪ್ ನೀತಿಗಳು ಹಾಗೂ ನಿರ್ಧಾರಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಟಿಲ್ಲರ್‌ಸನ್ ಉದ್ದೇಶಪೂರ್ವಕವಾಗಿ ಹಿರಿಯ ಅಧಿಕಾರಿಗಳಿಗೆ ಇವಾಂಕಾ ಜತೆ ತೆರಳದಂತೆ ನಿರ್ಬಂಧ ಹೇರಿದ್ದಾರೆ ಎನ್ನಲಾಗಿದೆ.