Advertisement
ಬೀಜಾಡಿ ಸರ್ವೀಸ್ ರೋಡ್ ಯು ಟರ್ನ್ನಿಂದ ಬೀಜಾಡಿ ವೈಜಂಕ್ಷನ್ ತಿರುವುವರೆಗೆ ಪರಿಶೀಲನೆ ನಡೆಸಿದ ಅವರು, ಸ್ಥಳೀಯರು ಇಲ್ಲಿ ಸಂಚರಿಸುವುದು ಹೇಗೆ? ಹೆದ್ದಾರಿಯ ಇಕ್ಕೆಲಗಳಲ್ಲಿ ಯಾವುದೇ ಸೇಫ್ಗಾರ್ಡ್ ಹಾಕಿಲ್ಲ ಯಾಕೆ ಎಂದು ಪ್ರಶ್ನಿಸಿದರು.. ಇನ್ನು ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಸೋಮವಾರ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ, ಕಾನೂನು ಪ್ರಕಾರ ಕೇಸು ದಾಖಲಿಸುವುದಾಗಿ ಎಚ್ಚರಿಸಿದರು.
2015 ರಿಂದ 2019 ರ ತನಕ 80 ಕ್ಕೂ ಹೆಚ್ಚಾ ಅಪಘಾತಗಳು ಸಂಭವಿಸಿವೆ. ಇಲ್ಲಿ ಧೂಳಿನ ಸಮಸ್ಯೆ ವ್ಯಾಪಕವಾಗಿದೆ. ರಾತ್ರಿ ಬೀದಿದೀಪಗಳು ಉರಿಯುತ್ತಿಲ್ಲ. ಕುಂದಾಪುರ ಭಾಗದಲ್ಲಿ ಸಮರ್ಪಕ ರೀತಿ ಕಾಮಗಾರಿ ನಡೆದಿಲ್ಲ ಎಂದು ಇದೇ ಸಂದರ್ಭ ಸ್ಥಳೀಯ ಪತ್ರಕರ್ತರು ಜಿಲ್ಲಾಧಿಕಾರಿಗಳಿಗೆ ಮನದಟ್ಟು ಮಾಡಿದರು. ಜಿಲ್ಲಾಧಿಕಾರಿ ಭೇಟಿ ವೇಳೆ ಜಿ.ಪಂ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾ.ಪಂ. ಸದಸ್ಯೆ ವೈಲೆಟ್ ಬೆರೆಟ್ಟೂ, ಬೀಜಾಡಿ ಗ್ರಾ.ಪಂ. ಸದಸ್ಯ ವಾದಿರಾಜ ಹೆಬ್ಟಾರ್, ಪಿಡಿಒ ಗಣೇಶ, ಗೋಪಾಡಿ ಗ್ರಾ. ಪಂ. ಅಧ್ಯಕ್ಷೆ ಸರಸ್ವತಿ ಪುತ್ರನ್, ಬೀಜಾಡಿ ಸರ್ವಿಸ್ ರೋಡ್ ಹೋರಾಟ ಸಮಿತಿ ಮುಖಂಡ ರಾಜು ಬೆಟ್ಟಿನ ಮನೆ ಉಪಸ್ಥಿತರಿದ್ದರು.