Advertisement

ದೇಶಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ 

04:31 PM Sep 16, 2018 | Team Udayavani |

ಕುಷ್ಟಗಿ: ಉದಾರೀಕರಣ, ಖಾಸಗೀಕರಣದ ಸಂದರ್ಭದಲ್ಲಿ ವೈಜ್ಞಾನಿಕ ಚಿಂತನೆಗಳು ರೂಢಿಸಿಕೊಂಡು ಮುಂದುವರಿದಾಗ ಮಾತ್ರ ವಿದ್ಯಾರ್ಥಿಯ ಬದುಕು ಸಾರ್ಥಕವಾಗುತ್ತದೆ ಪ್ರಾಚಾರ್ಯರಾದ ಬಿ.ಎಂ. ಕಂಬಳಿ ಹೇಳಿದರು. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್‌.ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ಪ್ರಥಮ ವರ್ಷದ ಬಿಎ. ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಒಬ್ಬ ವ್ಯಕ್ತಿಯನ್ನು ಹಾಳು ಮಾಡಲು ಅಥವಾ ಅವನತಿ ಹೊಂದಲು ನೂರಾರು ಜನ ಬೇಕಾಗಿಲ್ಲ. ಅವನ ಕೈಯಲ್ಲಿರುವ ವಸ್ತುವೇ ಸಾಕು. ಸರ್‌. ಎಂ. ವಿಶ್ವೇಶ್ವರಯ್ಯನವರು ದೇಶ ಕಂಡಂತಹ ಅಪರೂಪದ ವ್ಯಕ್ತಿ. ಸಾಧಕ, ದೇಶ ಪ್ರೇಮಿ, ಛಲಗಾರ, ಕ್ರಿಯಾಶೀಲ ಅಭಿಯಂತರರು ಅವರಂತೆ ಮತ್ತೊಬ್ಬರಿಲ್ಲ ಎಂದು ಹೇಳಿದರು.

Advertisement

ಕನ್ನಡ ಉಪನ್ಯಾಸಕ ಡಾ| ಈರಣ್ಣ ಹುರಳಿ ಮಾತನಾಡಿ, ಗುರುಶಿಷ್ಯರ ಪರಂಪರೆ ನೀರು ಲವಣದಂತಿರಬೇಕು. ಸರ್‌. ಎಂ. ವಿಶ್ವೇಶ್ವರಯ್ಯರ ಜನ್ಮದಿನಾಚರಣೆ ಸಂದರ್ಭದಲ್ಲಿಯೇ ಸಂಸ್ಥೆಗೆ ಪ್ರವೇಶ ಪಡೆದ ಕಿರಿಯ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಸ್ವಾಗತಿಸುವ ಸಂಪ್ರದಾಯ ಮುಂದುವರಿಯಲಿ ಎಂದರು. ವಿದ್ಯಾರ್ಥಿ ಗುರುವಿನಲ್ಲಿ ಲೀನವಾದಾಗ ಅವನ ಬದುಕು ಶ್ರೇಷ್ಠವಾಗುತ್ತದೆ ಎಂದರು.

ಉಪನ್ಯಾಸಕರಾದ ಎಂ. ಗವಾರಿ, ರತ್ನಾ ಬೆದವಟ್ಟಿ, ಭೀಮಣ್ಣ, ಫಕೀರಪ್ಪ, ಅಮರೇಶ ಕುಂಬಾರ, ವಿಶ್ವನಾಥ ತೊಂಡಿಹಾಳ, ಶಿಲ್ಪಾ ಪಾಟೀಲ, ಮಂಜುನಾಥ ಕಮ್ಮಾರ, ಮುತ್ತಣ್ಣ ಪಾಟೀಲ ಸಭೆಯಲ್ಲಿ ಉಪಸ್ಥಿತರಿದ್ದರು. ಪೂಜಾ ಮತ್ತು ಶೋಭಾ ಹಿರೇಮನಿ ಪ್ರಾರ್ಥಿಸಿದರು. ಭೀಮವ್ವ ಮತ್ತು ಸುನೀಲಕುಮಾರ ಮಡಿವಾಳರ ಕಾರ್ಯಕ್ರಮ ನಿರ್ವಹಿಸಿದರು. ಅಂಬಣ್ಣ ಚೂರಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next