Advertisement

ವಿಶ್ವೇಶ್ವರಯ್ಯನವರ ಸಾಮರ್ಥ್ಯ ಅಪಾರ

01:06 PM Sep 16, 2017 | |

ಶಿವಮೊಗ್ಗ: ವಿಶ್ವೇಶ್ವರಯ್ಯನವರ ಸಾಮರ್ಥ್ಯ ನಮ್ಮ ಊಹೆಗೆ ನಿಲುಕದ್ದು. ಅವರ ಸಾಧನೆಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಕಡೂರು ಕ್ಷೇತ್ರದ ಶಾಸಕ ವೈ.ಎಸ್‌.ವಿ. ದತ್ತ ಹೇಳಿದರು.

Advertisement

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಘದ ಸಂಭಾಂಗಣದಲ್ಲಿ ಆಯೋಜಿಸಲಾಗಿದ್ದ
ಇಂಜಿನಿಯರ್ ಡೇ ಮತ್ತು ಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು
ಮಾತನಾಡಿದರು.

ಸರ್‌.ಎಂ. ವಿಶ್ವೇಶ್ವರಯ್ಯ ಎಂಬ ಹೆಸರಿನಲ್ಲೇ ಶಕ್ತಿ ಕಾಣ ಸಿಗುತ್ತದೆ. ಅವರು ನಮ್ಮ ನಾಡಿಗೆ ನೀಡಿರುವ ಕೊಡುಗೆಯನ್ನು ನಾವು ಎಂದಿಗೂ ವೆ‌ುರೆಯುವಂತಿಲ್ಲ. ಅದ್ಭುತ ಕಲ್ಪನಾ ಶಕ್ತಿ ಅವರಲ್ಲಿತ್ತು. ಭಾರತ ಮಾತ್ರವಲ್ಲದೇ ಪ್ರಪಂಚದ ವಿವಿಧ ದೇಶಗಳಿಗೂ ತಮ್ಮ ಸಾರ್ಮರ್ಥಯವನ್ನು ತೋರಿಸಿದ ವ್ಯಕ್ತಿ ವಿಶ್ವೇಶ್ವರಯ್ಯ ಎಂದರು.

ವಿಶ್ವೇಶ್ವರಯ್ಯ ಕೇವಲ ಇಂಜೀನಿಯರ್‌ ಆಗಿರದೆ, ಮೈಸೂರು ಸಂಸ್ಥಾನದ ದಿವಾನರೂ ಆಗಿದ್ದರು. ಚಿಂತಕರಾಗಿ, ಆರ್ಥಿಕ ತಜ್ಞರಾಗಿ, ಶಿಕ್ಷಣ ತಜ್ಞರಾಗಿ, ತಮ್ಮ ಅಮೂಲ್ಯ ಸೇವೆಯನ್ನು ನಾಡಿಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ರೈತರಿಗೆ ನೆರವಾಗುವಂತೆ ಅವರು ಕಟ್ಟಿರುವ ಕನ್ನಂಬಾಡಿ ಕಟ್ಟೆ ಲಕ್ಷಾಂತರ ರೈತರಿಗೆ ಅನ್ನ ನೀಡುತ್ತಿದೆ. ಹಾಗಾಗಿ,
ರೈತರೂ ಸಹಾ ಅವರ ಜನ್ಮದಿನವನ್ನು ಆಚರಿಸಬೇಕು ಎಂದರು.

Advertisement

ಸುಯಶ ಎಂಟರ್‌ ಪ್ರೈಸಸ್‌, ಡೈರಿ ಫ್ರೆಶ್‌, ಸೇಫ್ ಪ್ಯಾಕ್‌ ಸಂಸ್ಥೆಯನ್ನು ಸನ್ಮಾನಿಸಲಾಯಿತು. ಕೆ.ಎಸ್‌. ಇಂಜಿನಿಯರಿಂಗ್‌ ವರ್ಕ್ಸ್ ಗೆ ವಿಶೇಷ ಪುರಸ್ಕಾರ ನೀಡಲಾಯಿತು. ಸಾಧನೆ ಮಾಡಿದ ಕಾರ್ಮಿಕರಾದ ಎಸ್‌.ಜಿ.ಕೆ. ಇಂಡಸ್ಟ್ರೀಸ್‌ನ ಜಿ. ಕುಮಾರ್‌, ಮೆಕ್‌ ವೈರ್ನ ನರಸಿಂಹ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಪರ್ಫೆಕ್ಟ್  ಅಲಾಯ್‌ ಕಾಂಪೋನೆಂಟ್ಸ್‌ ನಿರ್ದೇಶಕ ವಸಂತ್‌ ಕೆ. ದಿವಾಕರ್‌ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಎಂ. ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.

 ಉಪಾಧ್ಯಕ್ಷ ಜೆ.ಆರ್‌. ವಾಸುದೇವ್‌, ಎಂ. ರಾಜು, ಕಾರ್ಯದರ್ಶಿ ಬಿ.ಆರ್‌. ಸಂತೊಷ್‌, ಖಜಾಂಚಿ ಪಿ. ರುದ್ರೇಶ್‌
ಡಿ.ಎಸ್‌. ಅರುಣ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next