Advertisement

ಕಟ್ಟೆರೋಗ ಹತೋಟಿಗೆ ರೈತರಿಗೆ ಮಾಹಿತಿ ನೀಡಿ :ಅಧಿಕಾರಿಗಳಿಗೆ ಕಾಗೇರಿ ಸೂಚನೆ

09:31 AM Oct 20, 2020 | sudhir |

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಿಮೆಣಸು, ಬಾಳೆ, ಯಾಲಕ್ಕಿ, ವೆನಿಲ್ಲಾ ಬೆಳೆಗಳಿಗೆ ಕಟ್ಟೆ ರೋಗ ಹೆಚ್ಚಾಗಿ ಕಾಣಿಸುತ್ತಿದ್ದು, ಇದರ ಹತೋಟಿಗೆ ಸೂಕ್ತ ಕ್ರಮ ವಹಿಸುವಂತಾಗಬೇಕು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

Advertisement

ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಉತ್ತರ ಕನ್ನಡ ಜಿಲ್ಲೆ ಮಲೆನಾಡು ಪ್ರದೇಶವಾಗಿದ್ದು, ಹೆಚ್ಚಾಗಿ ಮಳೆ ಬೀಳುತ್ತಿರುವುದರಿಂದ ರೈತರ ಬೆಳೆಗಳು ರೋಗ ಹಾಗೂ ಕೀಟಗಳಿಂದ ಬಾಧಿತವಾಗುತ್ತಿದೆ. ಇದರ
ಜೊತೆಯಾಗಿ ಪಾರಂಪರಿಕವಾಗಿ ತೋಟಗಾರಿಕಾ ಬೆಳೆಗಳೂ ಸಹ ನಶಿಸುತ್ತಿರುವುದರಿಂದ ಅವುಗಳ ಸಂರಕ್ಷಣೆ ಮತ್ತು ಹೊಸ ತೋಟಗಾರಿಕೆ ಬೆಳೆಗಳನ್ನು ನಮ್ಮ ರೈತ ಬಾಂಧವರಿಗೆ ಬೆಳೆಸಲು ಪ್ರೋತ್ಸಾಹಿಸುವುದು ಅಗತ್ಯವಿರುವುದರಿಂದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಜೊತೆಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.

ಇದನ್ನೂ ಓದಿ:ಪೊಲೀಸ್ ಅಧಿಕಾರಿಯನ್ನು ಕೊಂದ ಉಗ್ರರ ಸದೆಬಡಿದ ಭದ್ರತಾ ಪಡೆ: ಓರ್ವ ಉಗ್ರನ ಹತ್ಯೆ, ಓರ್ವನ ಬಂಧನ

ಸಂಶೋಧನೆಗೆ ಒತ್ತುಕೊಟ್ಟು ರೈತರ ಬಾಳಿನಲ್ಲಿ ಹೊಸ ಹುರುಪು ನೀಡಿದಲ್ಲಿ ನಮ್ಮ ರಾಷ್ಟ್ರದ ಜಿಡಿಪಿ ಬೆಳವಣಿಗೆಗೆ ಉತ್ತರ ಕನ್ನಡ ಜಿಲ್ಲೆಯ ತೋಟಗಾರಿಕಾ ಕ್ಷೇತ್ರದಿಂದ ಹೆಚ್ಚಿನ ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ ಎಂದ ಕಾಗೇರಿ, ಕುಮಟಾ ಈರುಳ್ಳಿಯು ಒಂದು ಪ್ರಮುಖ ತರಕಾರಿ ಬೆಳೆಯಾಗಿದ್ದು, ಇದರ ವಿಶಿಷ್ಟತೆಯನ್ನು ನಮ್ಮ ರಾಜ್ಯ, ದೇಶ ಹಾಗೂ ವಿದೇಶಗಳಿಗೆ ತಿಳಿಸಲು ಅದರ
ವೈಜ್ಞಾನಿಕ ಗುಣಗಳ ಬಗ್ಗೆ ಅಧ್ಯಯನ ಮಾಡಬೇಕು. ಅದರಿಂದ ಈ ಭಾಗದ ರೈತರಿಗೆ ಹಿಚ್ಚಿನ ಪ್ರೋತ್ಸಾಹ
ನೀಡಿದಂತಾಗುತ್ತದೆ.

ಜೀರಿಗೆ ಮೆಣಸಿನಕಾಯಿ, ಮುಗಲ ಮೆಣಸಿನಕಾಯಿಗಳನ್ನು ರೈತರ ಆದಾಯ ಹೆಚ್ಚಿಸುವಲ್ಲಿ ಉಪ ಬೆಳೆಯಾಗಿ ಅನುಕೂಲವಾಗಿದೆ
ಮತ್ತು ಇದರ ವೈಜ್ಞಾನಿಕ ಗುಣಗಳಿಂದ ಸಾಕಷ್ಟು ರೋಗಗಳನ್ನು ತಡೆಯುತ್ತದೆ ಎಂದು ಹೇಳುತ್ತಿರುವುದರಿಂದ ಈ ಬಗ್ಗೂ ಮಾಹಿತಿ ನೀಡಬೇಕು. ನಸಗುನಿ ಕಾಯಿ ಔಷಧ  ಬಳ್ಳಿಯನ್ನು ಅಡಕೆ ಮರಗಳ ಮಧ್ಯೆ ಹೆಚ್ಚಾಗಿ ಬೆಳೆದು, ಈ ಬಳ್ಳಿಯ ಔಷ ಧ ಗುಣಗಳನ್ನು ಉಪಯೋಗ ಮಾಡುವ ಖಾಸಗಿ, ಸರ್ಕಾರಿ ಕಂಪನಿಗಳ ಜೊತೆ ಒಪ್ಪಂದದ ಬಗ್ಗೆ ಸೂಕ್ತ ಕ್ರಮ ವಹಿಸುವಂತಾಗಬೇಕು.

Advertisement

ಇದನ್ನೂ ಓದಿ:ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ: ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಹಲಸು, ಬಾಳೆ ಬೆಳೆಯನ್ನು ನಮ್ಮ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದ್ದರಿಂದ ಇವುಗಳಿಂದ ಹಪ್ಪಳ ತಯಾರಿಸುವ ಯಂತ್ರವನ್ನು ಕಂಡು ಹಿಡಿಯುವುದು ಸೂಕ್ತ ಎಂದೂ ಸಲಹೆ ನೀಡಿದ್ದಾರೆ. ಹಲಸು, ಅನಾನಸ್‌, ಬಾಳೆ ಹಣ್ಣುಗಳ
ಕೊಯ್ಲೋತ್ತರ ನಿರ್ವಹಣೆ ತಾಂತ್ರಿಕತೆಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವುದು ಅಗತ್ಯವಾಗಿದೆ. ನರ್ಸರಿಗಳನ್ನು ಮಾಡಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಕಾಗೇರಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next