Advertisement

ಹೊಸ‌ ಶಿಕ್ಷಣ ನೀತಿಯಿಂದ‌ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯ : ವಿಶ್ವೇಶ್ವರ ಹೆಗಡೆ ಕಾಗೇರಿ

12:24 PM Sep 05, 2021 | Team Udayavani |

ಶಿರಸಿ: ಹೊಸ‌ ಶಿಕ್ಷಣ ನೀತಿಯಿಂದ‌ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಗಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಅವರು ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ‌ ಉತ್ತಮ ಶಿಕ್ಷಕರಿಗೆ‌ ಪ್ರಶಸ್ತಿ ಪ್ರದಾನ ನಡೆಸಿ‌ ಮಾತನಾಡಿದರು.
ಹೊಸ‌ ಶಿಕ್ಷಣ ನೀತಿಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ.‌ ಹೊಸ‌ ಶಿಕ್ಷಣ ನೀತಿಯ ಬಗ್ಗೆ ಅಧ್ಯಯನ ಮಾಡಬೇಕು.

ಕೌಶಲಾಧಾರಿತ ಶಿಕ್ಷಣ ನೀತಿ ಇದಾಗಿದೆ. ಹೊಸ‌ ಶಿಕ್ಷಣ ನಿತಿ ಸ್ಪಷ್ಟತೆ ಮಾಡಬೇಕು. ಈ ಶಿಕ್ಷಣ ನೀತಿಯಿಂದಾಗಿ ಸ್ವಾಭಿಮಾನದ ಜೀವನ ನಡೆಸಲು ಇದು‌ ನೆರವಾಗಲಿದೆ ಎಂದೇ ಸರಕಾರಗಳು ಹೊಸ‌ ಶಿಕ್ಷಣ ನೀತಿ‌ ಅನುಷ್ಠಾನಕ್ಕೆ ಮುಂದಾಗಿದೆ‌ ಎಂದರು.

ಕರೋ‌ನಾ ಇದ್ದರೂ ಮಕ್ಕಳಲ್ಲಿ ಶೈಕ್ಷಣಿಕ ಸಮಸ್ಯೆ ಗೊತ್ತಿದೆ. ಇದನ್ನು ಎದುರಿಸಿ‌ ಒಳ್ಳೆಯ‌ ಕೆಲಸ ಮಾಡಿದ್ದಾರೆ ಎಂದ ಅವರು, ಕರೋನಾಕ್ಕೆ ವ್ಯಾಕ್ಸಿನ್‌ ಮಾತ್ರ ಪರಿಹಾರ‌ ಅಲ್ಲ, ರೋಗ ನಿರೋಧಕ‌ಶಕ್ತಿ‌ ಹೆಚ್ಚಿಸಿಕೊಳ್ಳಿ, ಮಕ್ಕಳಲ್ಲೂ ಇದನ್ನು ಹೆಚ್ಚಿಸುವ ಕಾರ್ಯ ಮಾಡಬೇಕು ಎಂದರು.

ಇದನ್ನೂ ಓದಿ :ನೆರೆ ಹಾನಿ ಪ್ರದೇಶಗಳಿಗೆ ಕೇಂದ್ರದ ತಂಡ ಭೇಟಿ: 10 ದಿನದಲ್ಲಿ ಸರ್ಕಾರಕ್ಕೆ ವರದಿ

Advertisement

ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಮುಂದೆ ಗುರಿ ಹಾಗೂ ಹಿಂದೆ ಗುರು‌ ಇರಬೇಕು. ಈ ಎರಡೂ ಇದ್ದರೆ ಜೀವನದಲ್ಲಿ ಸಾಧನೆ ಸಾಧ್ಯ.‌ ಗುರುವಿನ‌ ಕ್ಷೇತ್ರ ಪವಿತ್ರ ಕ್ಷೇತ್ರ‌ ಎಂದರು.

ವಿಧಾನ ಪರಿಷತ್ ಸದಸ್ಯ‌ ಶಾಂತಾರಾಮ ಸಿದ್ದಿ, ಡಿಡಿಪಿಐ ದಿವಾಕರ ಶೆಟ್ಟಿ, ತಹಸೀಲ್ದಾರ ಎಂ ಆರ್ ಕುಲಕರ್ಣಿ, ಡಯಟ್ ಡಿ ಆರ್ ನಾಯ್ಕ, ಬಿಇಓ ಎಂ ಎಸ್ ಹೆಗಡೆ, ಶಿಕ್ಷಕರ ಸಂಘದ ನಾರಾಯಣ ದೈಮನಿ, ಸಿ ಎಸ್ ನಾಯ್ಕ ಇತರರು‌ ಇದ್ದರು.

ಇದೇ ವೇಳೆ ಶಿಕ್ಷಕ ಬಂಧು ಯೋಜನೆಗೆ ಚಾಲನೆ ನೀಡಲಾಯಿತು. ನಿವೃತ್ತ ಶಿಕ್ಷಕರನ್ನೂ ಗೌರವಿಸಲಾಯಿತು.ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಉತ್ತಮ ಶಿಕ್ಷಕ‌ ಪ್ರಶಸ್ತಿಯನ್ನು ಶಿರಸಿ ತಾಲೂಕು ತೆಪ್ಪಗಿ ಶಾಲೆಯ ಸಹ ಶಿಕ್ಷಕ ನಾಗರಾಜ ವಿ. ನೀಲೆಕಣಿ, ಸಿದ್ದಾಪುರ ಸುಂಕತ್ತಿಯ ಸಹಶಿಕ್ಷಕಿ ಲಲಿತಾ ಜಿ.ಹೆಗಡೆ, ಮುಂಡಗೋಡ ಗೋದ್ನಾಳದ ಲೋಕೇಶ ಜಿ.ನಾಯ್ಕ, ಯಲ್ಲಾಪುರ ಶೀಗೆಕೇರಿಯ ನಾರಾಯಣ ಎಸ್.ಭಟ್, ಹಳಿಯಾಳ ಹನೋಡಾದ ರಾಮಪ್ಪ ಸಿದ್ಧರ, ಜೋಯಿಡಾ ಕರಂಜೆಯ ಛಾಯಾ ಎಸ್.ಡೇರಿಯೆಕರ, ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಿರಸಿ ತಾಲೂಕು ಹೆಗಡೆಕಟ್ಟಾ ಶಾಲೆಯ ಮುಖ್ಯ ಶಿಕ್ಷಕ ಸತೀಶ ಜಿ.ಹೆಗಡೆ, ಸಿದ್ದಾಪುರ ಬೇಡ್ಕಣಿಯ ಕೆ.ಪಿ.ರವಿ, ಯಲ್ಲಾಪುರ ಇಡಗುಂದಿಯ ಶಾಲೆಯ ಗಣಪತಿ ಎಚ್.ಗೌಡ, ಮುಂಡಗೋಡ ಉಮ್ಮಚಗಿಯ ಡಿ.ಅನುಪಮಾ, ಹಳಿಯಾಳ ಕೇರವಾಡದ ಶ್ರೀನಿವಾಸರಾವ ಎಸ್.ನಾವಲಿ, ಜೋಯಿಡಾ ಕಾಳಸಾಯಿಯ ಶಕುಂತಲಾ ಮಾಧವ ಅವರಿಗೆ ಪ್ರಶಸ್ತಿ ನೀಡಲಾಯಿತು.

ಪ್ರೌಢಶಾಲೆ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶ್ತಿಯನ್ನು ಶಿರಸಿ ನಗರದ ಆವೆಮರಿಯಾ ಪ್ರೌಢಶಾಲೆಯ ಕಿರಣ ಫರ್ನಾಂಡಿಸ್, ಸಿದ್ದಾಪುರ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ರಾಘವೇಂದ್ರ ನಾಯ್ಕ, ಯಲ್ಲಾಪುರ ಮಲವಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂತೋಷ ಜಿ.ಶೆಟ್ಟಿ, ಮುಂಡಗೋಡ ಅಂದಲಗಿ ಸರ್ಕಾರಿ ಪ್ರೌಢಶಾಲೆಯ ವೀರಪ್ಪ ಎಚ್.ಜಾವಳ್ಳಿ, ಹಳಿಯಾಳ ತೇರಗಾಂವ ಪ್ರೌಢಶಾಲೆಯ ಗುರುನಾಥ ಎಸ್.ಹೆಗಡೆ, ಜೋಯಿಡಾ ಬಾಪೇಲಿ ಕ್ರಾಸ್ ಸರ್ಕಾರಿ ಪ್ರೌಢಶಾಲೆಯ ಗೋವಿಂದ ಎಂ.ಅಂಬಿಗ ಅವರಿಗೆ ನೀಡಲಾಯಿತು.

ಒಬ್ಬ ಇಂಜನೀಯರ್ ತಪ್ಪು‌ಮಾಡಿದರೆ ಒಂದು‌ ಕಟ್ಟಡ ಕುಸಿಯಬಹುದು. ಒಬ್ಬ ಗುರು ತಪ್ಪಿದರೆ ಸಾವಿರಾರು ಭವಿಷ್ಯದ ಕುಡಿ ಹಾಳಾಗುತ್ತದೆ. ಹೀಗಾಗಿ ಗುರುವಿನ ಕಾರ್ಯ ದೊಡ್ಡದು.
– ಶಿವರಾಮ ಹೆಬ್ಬಾರ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next