Advertisement

ವಿಶ್ವೇಶ್ವರ ಶಿವಾಚಾರ್ಯರ ಪುರಪ್ರವೇಶ

10:09 AM Dec 31, 2018 | |

ಹಗರಿಬೊಮ್ಮನಹಳ್ಳಿ: ಬಸವಪಟ್ಟಣದ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಪುರ ಪ್ರವೇಶ ಹಾಗೂ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಹಾಲಶಂಕರ ಸ್ವಾಮೀಜಿ ನೇತೃತ್ವದಲ್ಲಿ ಹಳೆ ಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದಿಂದ ಪ್ರಾರಂಭವಾದ ಪಲ್ಲಕ್ಕಿ ಉತ್ಸವ ಪಟ್ಟಣದ ಬೀದಿಗಳಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಸಂಚರಿಸಿತು.

Advertisement

ನಂತರ ಹಾಲಸ್ವಾಮಿ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಮಾತನಾಡಿ, ಹಬ್ಬಗಳನ್ನು ಸಂಭ್ರಮದಿಂದ ಧಾರ್ಮಿಕ ಮನೋಭಾವದಿಂದ ಆಚರಿಸಬೇಕು. ಪರಸ್ಪರ ವೈಷಮ್ಯ ದೂರಮಾಡಿ ಸಮಾನರಾಗಿ ಬಾಳಬೇಕು. ಬದುಕನ್ನು
ಪ್ರೀತಿಸುತ್ತಾ ನಮ್ಮನ್ನು ನಾವು ಅತ್ಮಾವಲೋಕನ ಮಾಡಿಕೊಳ್ಳುತ್ತಾ ನಡೆಯಬೇಕು. ಸಮಾಜದ ಸ್ವಾಸ್ಥ್ಯ ಉಳಿಯಬೇಕಾದರೆ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಬೇಕು. ಸರಕಾರಗಳು ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಿದಾಗ ಮಾತ್ರ ರೈತ ಉದ್ಧಾರವಾಗಲು ಸಾಧ್ಯ. ಕೇವಲ ನಾಟಕೀಯ ಮಾತುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಹೇಳಿಕೆಗಳನ್ನು ಕೊಡುತ್ತಾ ಹೋಗುವುದನ್ನು ಸರಕಾರಗಳು ನಿಲ್ಲಿಸಬೇಕು ಎಂದರು.

ಧರ್ಮಸಭೆಯಲ್ಲಿ ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಸೋಮಶೇಖರ ದೇವರು, ಮಣನೂರು ಮಲ್ಲಿಕಾರ್ಜುನ ಶಿವಾಚಾರ್ಯ, ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗುತ್ತಿಗೆದಾರ ಉಮಾಪತಿ, ಮುಖಂಡರಾದ ಮಹಬಲೇಶ್ವರ
ರೆಡ್ಡಿ, ಕೆ.ಬಸವರಾಜಪ್ಪ, ಬಿ.ಜಿ.ಬಡಿಗೇರ, ಉಮಾಪತಿಸ್ವಾಮಿ, ಹೋಟೆಲ್‌ ಸಿದ್ದರಾಜು ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ನೀರಾವರಿ ಇಲಾಖೆಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ, ಕಳಸ ಹಿಡಿದು ಸಾಗಿದರು.
ಎಚ್‌. ಬಿ.ನಾಗನಗೌಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next